ಶಿವಮೊಗ್ಗ : ಆಗಸ್ಟ್ 11 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಸೊರಬ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕಾರ್ಯಕರ್ತೆಯರ ಹುದ್ದೆ : 01 : ಸೊರಬ ತಾಲೂಕು ಬಿಳಗಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯ ಒಂದು ಹುದ್ದೆಗೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 35ವರ್ಷ ವಯೋಮಿತಿಯೊಳಗಿನ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾದ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆ : 06 ಗಿಣಿವಾಲ, ಗಂಗವಳ್ಳಿ, ಉಳವಿ-2, ಬನದಕೊಪ್ಪ, ಕಾನುಕೊಪ್ಪ ಹೊಸೂರು ಮತ್ತು ತತ್ತೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿಚ್ಚಿಸುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು www.anganwadirecruit.kar.nic.in ಆನ್‍ಲೈನ್ ಮೂಲಕ ಸೆಪ್ಟಂಬರ್ 16 ರೊಳಗಾಗಿ ಸಲ್ಲಿಸುವಂತೆ ಹಾಗೂ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಸೊರಬ ತಾ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ವಿವರ : ಹುಣಸೆಕಟ್ಟೆ ಜುಂಕ್ಷನ್ ನಿವಾಸಿಗಳಾದ ವೆಂಕಟೇಶ್ ಮತ್ತು ಮಂಜುನಾಥ್ ಇವರನ್ನು ಜಿಂಕೆ ವನ್ಯಪ್ರಾಣಿ ಭೇಟಿ ಮಾಡಿರುವುದಕ್ಕೆ ಉಂಬ್ಲೆಬೈಲ್ ವಲಯದ ಸಿಬ್ಬಂದಿಗಳು ಮಾ0ಸ ಸಮೇತ ಬಂಧಿಸಿ ಅರಣ್ಯ ಮೊಕದ್ದಮೆ ಸಂಖ್ಯೆ 11/2022-23, ದಿನಾಂಕ: 10.08.2022 ನ್ನು ದಾಖಲಿಸಿರುತ್ತಾರೆ. ಸದರಿ ಕಾರ್ಯಾಚರಣೆಯಲ್ಲಿ ಖಈಔ ತೇಜ್, ಆಥಿಡಿಜಿo ಅಬ್ದುಲ್ ಕರೀಂ, ಗಿಡ್ಡೆಸ್ವಾಮಿ, ಅರಣ್ಯ ರಕ್ಷರಾದ ನವೀನ್, ರಾಜಶೇಖರ್, ಸಂತೋಷ, ದಿನೇಶ್, ರಿಯಾಜ್, ಶ್ರೀಕಾಂತ, ಅಲಿ ಭಾಗವಹಿಸಿದ್ದರು.