ಶಿವಮೊಗ್ಗ, ಜುಲೈ 20 : ಶಿಶು ಅಭಿವೃದ್ಧಿ ಯೋಜನೆ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್ಎಸ್ಎಲ್ಸಿ ಪಾಸಾದ ಮತ್ತು ಸಹಾಯಕರ ಹುದ್ದೆಗೆ ನಾಲ್ಕನೇ ತರಗತಿ ಉತ್ತೀರ್ಣ ಹೊಂದಿದ 18ರಿಂದ 35 ವಯೋಮಿತಿಯ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್-13 ರ ಬದಲಾಗಿ ಆಗಸ್ಟ್ -12 ಎಂದು ತಿದ್ದುಪಡಿಯಾಗಿರುತ್ತದೆ ಎಂದು ಹೊಸನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿರುತ್ತಾರೆ.
ಹೊಸನಗರ ತಾಲ್ಲೂಕಿನ ಕಾಳೇಶ್ವರ, ನೇರ್ಲಿಗೆ, ಕಲ್ಲುಘಟ್ಟ, ತಲನೇರಿ, ವಿನಾಯಕ ದೇವಸ್ಥಾನ, ಸೋರೆಕೊಪ್ಪ, ಹಳಿಯೂರು, ಕುಡಿಗೇರಿ, ಅಡ್ಯಾಳಕೊಪ್ಪ, ದೊಡ್ಡಿನಗದ್ದೆಯಲ್ಲಿ ಮಿನಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ, ಚಂದಾಳದಿಂಬ, ನೇರಲಮನೆ, ಚಂದಳ್ಳಿ, ತೊಗರೆ, ಬ್ರಹ್ಮೇಶ್ವರ, ಕಾಳಿಕಾಪುರ, ಚಿಕ್ಕಜೇನಿ, ಕಾರಕ್ಕಿ, ಹೊಸನಾಡು, ಮತ್ತಿಮನೆ, ಬಿದರಹಳ್ಳಿಯಲ್ಲಿ ಅಂಗನವಾಡಿ ಸಹಾಯಕರ ಹುದ್ದೆ ಹಾಗೂ ಗಿಣಿಕಲ್ನಲ್ಲಿ ಮುಖ್ಯ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಗೌರವಧನ ಆಧಾರದ ಮೇಲೆ ಸೇವೆ ಸಲ್ಲಿಸಲು ಆಸಕ್ತಿ ಇರುವ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿ, ದಿನಾಂಕ 12-08-2021ರ ಒಳಗಾಗಿ ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಹೊಸನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.