ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‍ನಿಂದ ಶನಿವಾರ ಆಯೋಜಿಸಿದ್ದ ಹೊಸಗುಂದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರದಿಂದ ಅಗತ್ಯವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಶೀಘ್ರಗತಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಹೊಸಗುಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಸದಾ ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಭರವಸೆ ನೀಡಿದರು.
ಧಾರ್ಮಿಕ ಕೇಂದ್ರಗಳು ಸಂಸ್ಕøತಿ ಪರಂಪರೆ ಉಳಿಸುವ ಮತ್ತು ಧರ್ಮ ರಕ್ಷಣೆಯ ಮಹಾತ್ಕಾರ್ಯಕ್ಕೆ ಪ್ರೇರಣೆ. ಭಗವಂತನ ಅನುಗ್ರಹದಿಂದ ಎಲ್ಲ ಒಳಿತಾಗಲಿ, ಪ್ರಾಚೀನ ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸುತ್ತೇನೆ ಎಂದರು.
ಸಾಗರ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಪರಿಸರದ ಕಾಳಜಿಯೊಂದಿಗೆ ವಿಧಾನಸಭೆ ಕ್ಷೇತ ವ್ಯಾಪ್ತಿಯಲ್ಲಿ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ನವದೆಹಲಿಯ ಶ್ರೀ ಸರ್ವಾನಂದ ಸರಸ್ವತಿ ಸ್ವಾಮೀಜಿ, ಪದ್ಮಶ್ರೀ ಪುರಸ್ಕøತ ಡಾ. ವಿ.ಆರ್.ಗೌರಿಶಂಕರ್, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ, ಎಂಎಲ್‍ಸಿ ಆರ್.ಪ್ರಸನ್ನಕುಮಾರ್, ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ. ಎಂ.ಕೆ.ನಾಯ್ಕ್, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಟಾಕಪ್ಪ, ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ಹೊಸೂರು ಗ್ರಾಪಂ ಅಧ್ಯಕ್ಷೆ ಕೃಷ್ಣವೇಣಿ, ಕಲಸೆ ಚಂದ್ರಪ್ಪ, ತಾಪಂ ಸದಸ್ಯೆ ಜ್ಯೋತಿ, ಟ್ರಸ್ಟ್ ಕಾರ್ಯದರ್ಶಿ ಗಿರೀಶ್ ಕೋವಿ ಉಪಸ್ಥಿತರಿದ್ದರು.
ನಗೆಹಬ್ಬದಲ್ಲಿ ಮಿಂದೆದ್ದ ಜನತೆ ಹೊಸಗುಂದ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಗಂಗಾವತಿ ಪ್ರಾಣೇಶ್ ನೇತೃತ್ವದ ತಂಡ ನಡೆಸಿಕೊಟ್ಟ ನಗೆಹಬ್ಬ ಜನರನ್ನು ನಗೆಗಡಲಲ್ಲಿ ತೇಲಿಸಿತು. ನರಸಿಂಹ ಜೋಷಿ, ಮಹಾಮನಿ ನಗೆತಂಡದಲ್ಲಿದ್ದರು. ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಸವಿತಾ ನೇತೃತ್ವದ ತಂಡ ಪೂಜಾ ಕುಣಿತ ನಡೆಸಿಕೊಟ್ಟಿತು……