ಶಿವಮೊಗ್ಗ: ಜು: 15: ಹಲವಾರು ವರ್ಷಗಳಿಂದ ಏಲೆಮರೆಕಾಯಿಯಂತೆ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ತೀರ್ಥಹಳ್ಳಿಯ ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಫಿ ಬೆಳೆಗಾರ ಶ್ರೀಗಂಧದ ಕೃಷ್ಣೇಗೌಡ ಹೇಳಿದರು.
ಅವರು ಕುವೆಂಪು ಕಲಾ ಮಂದಿರದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಯುವಜನಮೇಳದಲ್ಲಿ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಶ್ರೀ ಹೆಚ್.ಎಸ್.ನಾಗೇಂದ್ರರವರು ಪ್ರಗತಿ ಪರ ರೈತರಾಗಿ, ಸಮಾಜಸೇವಕರಾಗಿ, ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಸಮಾಜಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಕರೋನ ಸಂಕಷ್ಠದ ದಿನಗಳಲ್ಲಿ ಕಷ್ಠದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿ ಸಮಾಜಮುಖಿಯಾಗಿ ಏಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಮಾತನಾಡಿ ಹೆದ್ದೂರಿನ ಸಮಾಜಸೇವಕಿ ಹೆಚ್.ಎಸ್.ಸರೋಜಮ್ಮನವರ ಪ್ರೇರಣೆಯಿಂದ ಹೆಚ್.ಎಸ್.ನಾಗೇಂದ್ರರವರು ಸಮಾಜಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರಳ ಸಜ್ಜನಿಕೆಯ ನಗುಮುಖದ ಸ್ನೇಹಜೀವಿಯಾಗಿ ಎಲ್ಲರೊಂದಿಗೆ ಬೆರೆಯುವ ಅವರ ಗುಣ ಎಲ್ಲರಿಗೂ ಇಷ್ಠವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯೆ ಲಕ್ಷ್ಮಿದೇವಮ್ಮ ಮುಗಳಿ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೆಂದ್ರದ ಅಧ್ಯಕ್ಷ ಎಸ್.ಬಿ.ರಾಮಚಂದ್ರಪ್ಪ, ಕಾನೂನು ಸಲಹೆಗಾರ ಅಬಕಾರಿ ಇನ್ಸ್‍ಪೆಕ್ಟರ್ ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಕೆ.ಎನ್.ಬಸವರಾಜ, ಪ್ರಧಾನ ಕಾರ್ಯದರ್ಶಿ ಸಿ.ಆರ್.ರಘು ಮತ್ತೀತ್ತರು ಉಪಸ್ಥಿತರಿದ್ದರು.