ಶಿವಮೊಗ್ಗದಿಂದ ೧೮ ಕಿ.ಮೀ ದೂರದಲ್ಲಿರುವ ಹೊಳಲೂರು , ಇಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ . ಕಳೆದ ೨೦ ವರುಷಗಳಿಂದ ಸ್ವಾವಲಂಬಿ ಸ್ವತಂತ್ರ ಜೀವನ ನಡೆಲು ಸಹಾಯವಾಗುವಂತೆ ಸರಿ ಸುಮಾರು ೧೭೦೫೦ ಯುವಕ ಯುವತಿಯರನ್ನು ಗುರುತಿಸಿ ಪ್ರೇರೇಪಿಸಿ ತರಬೇತಿಯನ್ನು ನೀಡುತ್ತಿರುವುದು ಹಾಗು ಸ್ವ-ಉದ್ಯೋಗ ಪ್ರಾರಂಬಿಸಲು ನೆರವು ಹಾಗು ಮಾಗ೯ದಶ೯ನ ನೀಡುವುದು ಸಂಸ್ಥೆಯ ಧ್ಯೇಯೋದ್ಯೇಶವಾಗಿದೆ.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ತೆಯ ಚಟುವಟಿಕೆಗಳು:
ಇಲ್ಲಿ ಹಲವಾರು ರೀತಿಯ ಚಟುವಟಿಕೆಗಳು, ಉದ್ಯಮ ಶೀಲತೆ ಹಾಗು ಸ್ವ-ಉದ್ಯೋಗದ ಬಗ್ಗೆ ತರಬೇತಿ ಮತ್ತು ಮಾಗ೯ದಶ೯ನ , ಸ್ವ ಉದ್ಯೋಗಕ್ಕೆ ವಿಫುಲ ಅವಕಾಶಗಳನ್ನು ಮನದಟ್ಟ್ಟು ಮಾಡುವುದು, ಗ್ರಾಮಾಭಿವೃದ್ದಿಯಲ್ಲಿ ಪಾಲ್ಗೊಳ್ಳುವ ವಿವಿದ ಸಂಘ ಸಂಸ್ಥೆ ಹಾಗು ಗ್ರಾಮೀಣ ಜನಜೀವನ ಉತ್ತಮವಾಗಲು ಔಚಿತ್ತ್ಯ ಪೂಣ೯ವಾದ ತಂತ್ರಙ್ಞಾನಗಳು, ಸಂಶೋಧನೆಗಳ ಪ್ರದಶ೯ನ ಮತ್ತು ಪರಿಚಯ ಮಾಡಿಕೊಡುವುದು ಸ್ವ ಉದ್ಯೋಗ ಸಂಸ್ಥೆಯ ಉದ್ದೇಶವಾಗಿದೆ..
ಇಲ್ಲಿಗೆ ತರಬೇತಿಗೆ ಬರುವಂತಹ ಅಭ್ಯಥಿ೯ಗಳ ಅಹ೯ತೆ:
ತರಬೇತಿಗೆ ಬರುವಂತಹ ಅಭೈಥಿ೯ಗಳು ಸ್ವ ಉದ್ಯೋಗ ಕೈಗೊಳ್ಳುವ ಆಸಕ್ತಿ ಇರುವವರಾಗಿರಬೇಕು ೧೮ ರಿಂದ ೪೫ ವರುಷ ವಯೋಮಿತಿಯೊಳಗಿರಬೇಕು ಓದು ಬರಹ ತಿಳಿದಿರುವ ನಿರುದ್ಯೋಗ ಯುವಕ ಯುವತಿಯರಿಗೆ ಇಲ್ಲಿ ಅವಕಾಶವಿದೆ.
ಇಲ್ಲಿ ಸಿಗುವವಂತಹ ತರಬೇತಿಯ ವೈಶಿಷ್ಟೈತೆಗಳು:
ಗ್ರಾಮೀಣ ಸ್ವ ಉದ್ಯೋಗ ಸಂಸ್ಸ್ತೆಯಲ್ಲಿ ನುರಿತ ತರಬೇತಿದಾರರು, ಇದ್ದು ಪ್ರಯೋಗಿಕವಾಗಿ ಕಲಿಕೆಗೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ.ವೈಙ್ಞಾನಿಕವಾಗಿ ತರಬೇತಿಯ ಪದ್ದತಿಯನ್ನು ಅನುಸರಿಸಲಾಗುತ್ತದೆ. ತಂತ್ರಙ್ಞಾನ ಮಾಹಿತಿ ,ಆಪ್ತ ಸಮಾಲೋಚನೆ , ಇಲ್ಲಿ ಸಿಗುವ ಉತ್ತಮ ಕಲಿಕೆಯ ಸಾಮಗ್ರಿಗಳು ಗುಂಪು ಚಚೆ೯ ಹಾಗು ಕ್ಷೇತ್ರ ದಶ೯ನ ಯೋಜನಾ ವರದಿ ತಯಾರಿ, ಸಕಾ೯ರಿ / ಬ್ಯಾಂಕುಗಳು ಯೋಜನೆಗಳ ಪರಿಚಯ ಯಶಸ್ವಿ ಉದ್ಯಮಿಗಳೊಡನೆ ಸಂವಾದ ಹಣಕಾಸು ಸೌಲಭ್ಯ ಪಡೆಯಲು ಮಾಗ೯ದಶ೯ನ ಕ್ಷೇತ್ರ ಸಂದಶ೯ನ, ವ್ಯವಹಾರದಲ್ಲಿ ಅನುಭವ ಪಡೆಯಲು ಅವಕಾಶ ಮತ್ತು ಮಾಗ೯ದಶ೯ನ ಸ್ವ ಉದ್ಯೋಗ ಸ್ಥಾಪಿಸಲು ಅವಲೋಕನ ಇಲ್ಲಿ ವೈಷಿಷ್ಟ್ಯಗಳು.
ಸಂಸ್ಥೆಯಲ್ಲಿನ ಸೌಕಯ೯ಗಳು:
ಇಲ್ಲಿಗೆ ತರಬೇತಿಗೆಂದು ಬರುವ ಅಹ೯ ಅಭ್ಯಥಿ೯ಗಳಿಗೆ ಉಚಿತ ತರಬೇತಿ ,ಊಟ, ಮತ್ತು ವಸತಿ ಹಾಗು ಕಲಿಕೆಗೆ ಸೂಕ್ತ ಪರಿಸರ, ಸ್ವ ಉದ್ಯೋಗಿಗಳಿಂದ ಮಾಹಿತಿ ಹಂಚಿಕೆ ಸಂಪಕ೯, ಸುಸಜ್ಜಿತ ಗ್ರಂಥಾಲಯ,ಪ್ರಾಯೋಗಿಕ ತರಬೇತಿ, ಮಾಹಿತಿ ಭಂಢಾರವೇ ಇಲ್ಲಿದೆ.
ಇಲ್ಲಿ ಲಭ್ಯವಿರುವ ತರಬೇತಿಗಳು ಕೃಷಿ ಸಂಭಂಧಿತ , ತಾಂತ್ರಿಕ ತರಬೇತಿ ಇಲ್ಲಿ ಲಭ್ಯ. ಗ್ರಾಮೀಣ ಸ್ವ- ಉದ್ಯೋಗ ಸಂಸ್ಥೆಯಲ್ಲಿ ವಷ೯ ಇಡೀ ತರಬೇತಿ ನಡೆಯಲಿದ್ದು ಆಯ ತರಬೇತಿ ನಡೆಯುವಾಗ ಅಜಿ೯ ಸಲಿಸಿದ ಅಹ೯ ಅಭ್ಯಥಿ೯ಗಳನ್ನು ಕರೆಯಲಾಗುವುದು. ತರಬೇತಿಗೆ ಬ್ಯಾಂಕುಗಳ ಮೂಲಕ ಅಜಿ೯ಗಳು ಶಿಫಾರಸ್ಸು ಮಾಡಿದರೆ ಪ್ರಾಶಸ್ತ್ಯ ನೀಡಲಾಗುವುದು. ಶಿಭಿರಾಥಿ೯ಗಳ ಆಯ್ಕೆಯನ್ನು ಅಗತ್ಯವಾದ ಸಂದಶ೯ನ ಅಥವಾ ಲಿಖಿತ ಪರೀಕ್ಷಗಳ ಮೂಲಕ ಆಯ್ಕೆ ಮಾಡಲಾಗುವುದು. ಇಲ್ಲಿಗೆ ತರಬೇತಿಗೆಂದು ಬಂದಿರುವಂತಹ ಅಭ್ಯಥಿ೯ಗಳಿಗೆ ಉಚಿತವಾಗಿ ಉಳದುಕೊಳ್ಳಲು ವಸತಿ, ಊಟ ಹಾಗು ಕಲಿಕೆಗೆ ಸೂಕ್ತ ಪರಿಸರನ್ನು ಕಲ್ಪಿಸಲಾಗಿದೆ. ತರಬೇತಿ ಪಡೆದ ನಂತರ ೨ ವರುಷಗಳವರೆಗೆ ಅವರ ಮೇಲೆ ನಿಗಾ ಇಡಲಾಗುವುದು ಅವರಿಗೆ ಸೂಕ್ತ ಮಾಗ೯ದಶ೯ನ ನೀಡಲಾಗುವುದು. ಇಲ್ಲಿಯವರೆವಿಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ನೆಡಸಿದ ಅಂಕಿ ಅಂಶಗಳ ಪ್ರಕಾರ ೧೫೦೦೦ ಸಾವಿರ ತರಬೇತಿ ಪಡೆದ ಅಭ್ಯಥಿ೯ಗಳು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಸ್ವತಂತ್ರ ಜೀವನ ಮಾಡುತ್ತಿದ್ದಾರೆ
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಒಂದು ಮಾದರಿ ಸಂಸ್ಥೆಯಾಗಿದ್ದು, ಇಲ್ಲಿ ಸಿಗುವ ತರಬೇತಿಗಳಿಂದ ಹಲವಾರು ನಿರುದ್ಯೋಗ ಅಭ್ಯಥಿ೯ಗಳು ತರಬೇತಿ ಪಡೆದ ನಂತರ ಸ್ವಾವಲಂಬಿ ಸ್ವತಂತ್ರ ಬದುಕನ್ನು ಕಟ್ಟಿಕೊಂಡಿದ್ದು , ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆ ತರಬೇತಿಗೆ ಬಂದಂತಹ ಅಭ್ಯಥಿ೯ಗಳಿಗೆ ಇಲ್ಲಿನ ಭೋದಕ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಸಿಗುತ್ತಿದ್ದು , ಇಲ್ಲಿನ ಸಿಬ್ಬಂದಿಯೂ ಕೂಡ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ.