News Next

ಶಿವಮೊಗ್ಗ :- ಬ್ರಿಟೀಷರ ವಿರುದ್ಧ ನಿರಂತರ ಹೋರಾಟಮಾಡಿ ಅನೇಕರ ತ್ಯಾಗ ಬಲಿದಾನಗಳಿಂದ ಭಾರತ ಸ್ವಾತಂತ್ರ್ಯ ವಾಯಿತು. ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಕಳೆದಿದ್ದೇವೆ. ಪ್ರಜಾಪ್ರಭುತ್ವ ವ್ಯವಸೆÀ್ಥಯನ್ನು ಒಪ್ಪಿಕೊಂಡಿದ್ದೇವೆ. ನಮ್ಮ ವ್ಯವಸ್ಥೆಯನ್ನು ವಿಶ್ವವೇ ಬೆರಗು ಕಣ್ಣಿನಿಂದ ನೋಡುತ್ತಿದೆ. ಈ ಎಪ್ಪತ್ತೈದು ವರ್ಷಗಳ ಅವಧಿಯಲ್ಲಿ ಹಲವು ಪಕ್ಷಗಳ ಆಡಳಿತವನ್ನು ನೋಡಿದ್ದೇವೆ. ಹಲವು ಸಿದ್ಧಾಂತಗಳು ಈ ನೆಲದಲ್ಲಿ ಮೈದಾಳಿ ಹೊರ ಹೊಮ್ಮಿದ್ದು ಈ ನೆಲಕ್ಕಿರುವ ಸತ್ವ. ಬಹುತ್ವದ ಭಾರತದಲ್ಲಿ ಎಲ್ಲವೂ ಇದೆ. ಎಲ್ಲವನ್ನೂ ಒಳಗೊಂಡ ಬಹುತ್ವ ಭಾರತ ಶಕ್ತಿಯುತವಾಗಿ ರೂಪಗೊಳ್ಳಲು ಇಲ್ಲಿರುವ ಸಂವಿಧಾನ, ಜನರ ಭಾವನೆ, ಏಕತೆಯ ಪ್ರತೀಕವಾಗಿದೆ. ಸ್ವಾತಂತ್ರ್ಯ ಬಂದಿದ್ದು ಹೇಗೆ. ? ಎಷ್ಟು ಜನರು ತ್ಯಾಗ ಮಾಡಿದ್ದಾರೆ. ಬಲಿದಾನವಾಗಿದ್ದಾರೆ. ಅವರುಗಳ ನೆನಪು ಮಾಡಿಕೊಳ್ಳುವ ಸಲುವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಭಾರತ ಸೇವಾದಳದ ಸಹಕಾರದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ತಾಲ್ಲೂಕಿನಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಘಟನೆಗಳು, ಅದರಲ್ಲಿ ಭಾಗವಹಿಸಿ ಹುತಾತ್ಮರಾದ ಹೋರಾಟಗಾರರು ಅವರ ನೆನಪು ಮಾಡಿಕೊಂಡು ಅವರ ತ್ಯಾಗವನ್ನು, ಬಲಿದಾನವನ್ನು ಸ್ಮರಣೆ ಮಾಡಿಕೊಂಡು ಅವರಿಗೆ ಕೃತಜ್ಞೆತೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಘಟನೆ, ಹೋರಾಟಗಾರರ ನೆನಪು ಮಾಡಿಕೊಳ್ಳಲು ಡಾ. ಕೆ. ಜಿ. ವೆಂಕಟೇಶ್, ಶಿಕಾರಿಪುರ ತಾಲ್ಲೂಕು ಘಟನೆಗಳನ್ನು ಕುರಿತು ಉಪನ್ಯಾಸಕರಾದ ಡಾ. ಸುನಿಲ್, ಸೊರಬ ತಾಲ್ಲೂಕಿನ ವಿಚಾರವಾಗಿ ಹೋರಾಟಗಾರ ರಾಜಪ್ಪ ನವರು ಮಾತನಾಡಲಿದ್ದಾರೆ.
ಸಾಗರ ತಾಲ್ಲೂಕಿನ ವಿಚಾರವಾಗಿ ಚಿಂತಕರಾದ ದೇವೇಂದ್ರ ಬೆಳೆಯೂರು, ಸಾಹಿತಿ ವಿ. ಟಿ. ಸ್ವಾಮಿ, ಹೊಸನಗರ ತಾಲ್ಲೂಕಿನ ಹೋರಾಟವನ್ನು ಕುರಿತು ಸಹಕಾರಿ ದುರೀಣ ಎಂ. ವಿ. ಜಯರಾಮ್, ಹಿರಿಯ ಸಾಹಿತಿ ಪ್ರೊ. ಮಾರ್ಷಲ್ ಶರಾಮ್, ತೀರ್ಥಹಳ್ಳಿ ತಾಲ್ಲೂಕಿನ ಹೋರಾಟಗಾರರ ಕುರಿತು ಹಿರಿಯ ಸಾಹಿತಿಗಳಾದ ಡಾ. ಜೆ. ಕೆ. ರಮೇಶ್, ಭದ್ರಾವತಿ ತಾಲ್ಲೂಕು ಹೋರಾಟವನ್ನು ಕುರಿತು ಕಾರ್ಮಿಕ ನಾಯಕರಾಗಿದ್ದ ತಿಮ್ಮಪ್ಪ ಅವರು ಮಾಹಿತಿ ನೀಡಲಿದ್ದಾರೆ.
ಆಗಸ್ಟ್ 12 ಮತ್ತು 13 ರಂದು ಎರಡು ದಿನಗಳ ಕಾಲ ಸಂಜೆ 6-30 ರಿಂದ ಜೂಮ್ ಆಪ್ ಮತ್ತು ಫೇಸ್ ಬುಕ್ ತೆರೆದ ತಂತ್ರಾಂಶದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ನಾವು ಎಷ್ಟು ಓದಿದ್ದೇವೆ, ಎಷ್ಟು ಡಿಗ್ರಿ ಪಡೆದಿದ್ದೇವೆ. ಯಾವ ಹುದ್ದೆಯಲ್ಲಿದ್ದೇವೆ, ಎಷ್ಟು ಗಳಿಸಿದ್ದೇವೆ ಎನ್ನುವುದು ಮುಖ್ಯ ಆಗುವುದಾದರೆ ನಾನು ಈ ಸ್ಥಿತಿಗೆ ಬರಲು ಯಾರ ಯಾರ ತ್ಯಾಗವಿದೆ, ಬಲಿದಾನವಿದೆ ಅನ್ನುವುದನ್ನು ಅರಿಯಬೇಕಲ್ಲವೇ. ಎಪ್ಪತ್ತೈದು ವರ್ಷಗಳಲ್ಲಿ ನಾನು ಏನಾದೆ ಎನ್ನುವುದಕ್ಕಿಂತ ನಾನು ನಾನಾಗಳು ಹಿರಿಯರ ಹೋರಾಟವನ್ನು ಸ್ಮರಿಸಿ ಕೊಳ್ಳುವುದು ನಮ್ಮ ಜವಾಬ್ದಾರಿಯಾಗಬೇಕು. ಬದುಕಿನ ಕಾಲ ಚಕ್ರದಲ್ಲಿ ಹುಟ್ಟು, ಸಾವು ಇದ್ದೇಯಿದೆ. ಆದರೆ ನಾಗರೀಕರಂತೆ ಕಾಣುವ ನಾವು ಹಿರಿಯರನ್ನು ಉಪೇಕ್ಷೆ ಮಾಡುವುದು ಸರಿಯೇ. ಸಜ್ಜನಿಕೆಯೆ.?. ವಿವೇಕ ಕಳೆದು ಕೊಂಡವರಂತೆ ವರ್ತಿಸುವವರಿಗೆ ವಾಸ್ತವಿಕ ಅರಿವಾಗಿಸಲು ಈ ಪ್ರಯತ್ನ ಮಾಡಿದ್ದೇವೆ ಎಂದು ಡಿ. ಮಂಜುನಾಥ ವಿವರಿಸಿದ್ದರೆ.
ಬನ್ನಿ ಎಲ್ಲರೂ ಭಾಗವಹಿಸಿ. ನಿಮ್ಮ ಹಿರಿಯರು, ನಿಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರು ಯಾವೆಲ್ಲ ಹೋರಾಟದಲ್ಲಿ ಭಾಗವಹಿಸಿದರು. ಏನೆಲ್ಲಾ ಪುರಸ್ಕಾರ ಪಡೆದರು. ಅವರನ್ನು ನಾವು ಹೇಗೆಲ್ಲ ನಡೆಸಿಕೊಂಡೆವು. ಈಗಲಾದರೂ ನಮ್ಮ ಜವಾಬ್ದಾರಿಯನ್ನು ಅರಿಯುವ ಪ್ರಯತ್ನ ಮಾಡೋಣ. ಬನ್ನಿ ನಮ್ಮೋಂದಿಗೆ ಕೈ ಜೋಡಿಸಿ. ನಮ್ಮ ತಜ್ಞರು ಏನು ಹೇಳುತ್ತಾರೆ ಅರಿಯುವ ಕೆಲಸ ಮಾಡೋಣ ಎಂದು ಡಿ. ಮಂಜುನಾಥ ವಿನಂತಿಸಿದ್ದಾರೆ.

error: Content is protected !!