ಸ್ವಾತಂತ್ರ್ಯದ ಅಮೃತದ ಮಹೋತ್ಸವದೊಂದಿಗೆ ಕುಷ್ಠ ರೋಗದಿಂದ ಮುಕ್ತ ಭಾರತದ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಿವಮೊಗ್ಗ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮ ಇದರ ಅಡಿಯಲ್ಲಿ 2022ರ ಜನವರಿ 30ರಿಂದ 13ನೇ ಫೆಬ್ರವರಿ 2022ರವರೆಗೆ ಕುಷ್ಠ ರೋಗ ಜನಜಾಗೃತಿ ಅಂದೋಲನ ನಡೆಯುತ್ತಿದೆ. ವಿಶೇಷ ವಾಹನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

ಕುಷ್ಠ ರೋಗ ಜಾಗೃತಿ
ಕುಷ್ಠ ರೋಗ ಆರೋಗ್ಯವಂತರಿಗೆ ಹರಡುತ್ತಿದೆ. ಈ ಬಗ್ಗೆ ಎಚ್ಚರವಾಗಿರಬೇಕು. ಚಿಕಿತ್ಸೆ ಪಡೆಯದ ರೋಗಿಯ ಮೂಗಿಯ ದ್ರವದಿಂದ, ಉಸಿರಿನ ಮೂಲಕವು ರೋಗ ಹರಡುತ್ತದೆ. ಇದು ಯಾರನ್ನು ಬೇಕಾದರೂ ಆವರಿಸಬಹುದು. ಆದರೆ ವಂಶಪಾರಂಪರ್ಯವಾಗಿ ಈ ರೋಗ ಬರುವುದಿಲ್ಲ. ಕೆಲವರು ತಾವು ಪಾಪ ಮತ್ತು ಶಾಪಗಳಿಂದ ಬರುತ್ತದೆ ಅಂದುಕೊಂಡಿದ್ದಾರೆ. ಅವೆಲ್ಲವೂ ಮೂಢನಂಬಿಕೆ. ಮೈಮೆಲೆ ಮಚ್ಚೆಗಳು ಕಾಣಿಸಿಕೊಂಡರೆ ಗುಪ್ತವಾಗಿಡದೇ ವೈದ್ಯರಿಗೆ ತೋರಿಸಬೇಕು. ರೋಗ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದರಿಂದ ಅಂಗವಿಕಲತೆ ತಡೆಗಟ್ಟಬಹುದು. ಇದಕ್ಕೆ ಸಂಬಂಧಿಸಿದ ಔಷಧಿ, ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಆತಂಕಪಡದೇ ಚಿಕಿತ್ಸೆಗೆ ಒಳಪಟ್ಟರೆ ಗುಣಮುಖರಾಗಬಹುದು. ಕುಷ್ಠ ರೋಗದ ಬಗ್ಗೆ ಸರಿಯಾದ ತಿಳವಳಿಕೆ ನೀಡಲು ಜಿಲ್ಲಾದ್ಯಂತ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಕರಪತ್ರ, ಸಾಕ್ಷ್ಯಚಿತ್ರ, ಭಿತ್ತಿಚಿತ್ರ, ಟ್ಯಾಬ್ಲೋಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.


ಕುಷ್ಠ ರೋಗದ ಬಗ್ಗೆ ಜನರಲ್ಲಿ ಇನ್ನೂ ಮೂಢನಂಬಿಕೆಗಳಿವೆ. ಇದಕ್ಕೆ ವೈಜ್ಞಾನಿಕ ಕಾರಣ, ಇದರಿಂದ ಹೇಗೆ ಮುಕ್ತಗೊಳ್ಳುವುದು ಎಂಬುದರ ಬಗ್ಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿಯೇ ವೇಳಾಪಟ್ಟಿ ಸಿದ್ಧಪಡಿಸಿ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
| ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ

error: Content is protected !!