ಶಿವಮೊಗ್ಗ. ಮೇ 22 : ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸೌರ ಶಾಖ ಪಟ್ಟಿಗೆ (Soಟoಡಿ ಖಿuಟಿಟಿeಟ ಆಡಿಥಿeಡಿ) ಘಟಕಗಳಿಗೆ ಸಹಾಯಧನ ನೀಡಲು ಉದ್ದೇಶಿಸಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಘಟಕಗಳಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಮೆಣಸಿನಕಾಯಿ, ಶುಂಠಿ ಇತ್ಯಾದಿ ಬೆಳೆಗಳನ್ನು ಒಣಗಿಸಬಹುದಾಗಿದೆ. ಇದಕ್ಕಾಗಿ ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಅಭಿವೃದ್ಧಿಪಡಿಸಿರುವ 100 ಕೆ.ಜಿ. ಸಾಮಥ್ರ್ಯದ ಸೌರಶಾಖ ಘಟಕ ನಿರ್ಮಾಣಕ್ಕೆ ರೂ. 55,000/- ವೆಚ್ಚವಾಗಲಿದ್ದು, ಶೇ.50 ರಂತೆ ಗರಿಷ್ಠ ರೂ. 57,500/-ಗಳ ಹಾಗೂ 1000 ಕೆ.ಜಿ. ಸಾಮಥ್ರ್ಯದ ಘಟಕ ನಿರ್ಮಾಣಕ್ಕೆ ರೂ. 5.70ಲಕ್ಷ ವೆಚ್ಚವಾಗಲಿದ್ದು, ಶೇ.50 ರಂತೆ ರೂ. 2.85 ಲಕ್ಷಗಳವರೆಗೆ ಸಹಾಯಧನ ನೀಡಲಾಗುವುದು. ಈ ಘಟಕವನ್ನು ಇಲಾಖೆಯಿಂದ ನೋಂದಾಯಿತ emಠಿಚಿಟಿeಟ ಮಾಡಿರುವ ತಯಾರಕರು/ಸರಬರಾಜುದಾರರಿಂದ ಸ್ಥಾಪಿಸಿಕೊಳ್ಳಬೇಕಾಗುವುದು. ಆಸಕ್ತ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದು.

error: Content is protected !!