ಕರ್ನಾಟಕ ಸರ್ಕಾರ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಹಾಗೂ ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಉಪನಿರ್ದೇಶಕರ ಕಛೇರಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಆವರಣದಲ್ಲಿ ಇಂದು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕೋವಿಡ್ ೧೯ ಕೋರೋನ ವೈರಸ್ ಸಮಸ್ಯೆ ಯಿಂದ ದೇಶವು ಲಾಕ್ ಡೌನ್ ಆಗಿರುವ ಈ ಪರಿಸ್ಥಿತಿಯಲ್ಲಿ ಬಡ ರೋಗಿಗಳಿಗೆ ರಕ್ತದ ಅತ್ಯವಶ್ಯಕತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖಾ ಧಿಕಾರಿಗಳು ವಿನಂತಿಸಿ ಕೊಂಡಿರುವ ಮೇರೆಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ವತಿಯಿಂದ ಮಾಜಿ ಸೈನಿಕರು ಮತ್ತು ಕುಟುಂಬದವರು ಇವರಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಎನ್. ಚಂದ್ರಪ್ಪ ಉಪನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಉಪಸ್ಥಿತರಿದ್ದರು.