ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ , ಹಾಗೂ ಶಿಮುಲ್ ಮತ್ತು ಇವರ ಹಾಲು ಉತ್ಪಾದಕರ ಸಹಕಾರ ಸಂಘ ಸೂಗುರು ಇದರ ಆವರಣದಲ್ಲಿ ಮಿಶ್ರತಳಿ ಹಸು., ಮಣಕ ಮತ್ತು ಕರುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ವಿವಿಧ ಕಾರಣದಿಂದ ಅನುತ್ಪಾದಕತೆಯತ್ತ ತೆರಳಿದ ಮತ್ತು ಯಾವುದೇ ಪ್ರಯತ್ನಕ್ಕೂ ಗರ್ಭ ಧರಿಸದೇ ಇರುವ ಆಕಳುಗಳನ್ನು ಆಧುನಿಕ ರೀತಿಯಲ್ಲಿ ತಪಾಸಣೆ ಮಾಡಿ, ಅನುತ್ಪಾದಕತೆಯ ನಿಖರ ಕಾರಣ ಕಂಡು ರೀತಿಯ ಚಿಕಿತ್ಸೆ ನೀಡಿ ಅವುಗಳನ್ನು “ಅನುತ್ಪಾದಕತೆಯಿಂದ ಉತ್ಪಾಕತೆಯೆಡೆಗೆ” ತೆಗೆದುಕೊಂಡು ಹೋಗುವ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸೂಗುರು ಮತ್ತು ಸುತ್ತಮುತ್ತಲಿನ ಹಳ್ಳಿಯ 49 ಜಾನುವಾರುಗಳ ಚಿಕಿತ್ಸೆಯನ್ನು ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಡಾ: ಎನ್.ಬಿ.ಶ್ರೀಧರ, ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು, ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆ, ಶಿವಮೊಗ್ಗ ಇವರು ಜಾನುವಾರುಗಳಲ್ಲಿ ಅನುತ್ಪಾದಕತೆಯಿಂದ ಅನೇಕ ಜಾನುವಾರುಗಳು ಬಂಜೆತನಕ್ಕೆ ಒಳಗಾಗುತ್ತಿದ್ದು, ಇದಿರಿಂದ ರೈತರಿಗೆ ಬಹಳ ನಷ್ಠವಾಗುತ್ತಿದ್ದು ಇದನ್ನು ತಪ್ಪಿಸಲು ಈ ತರದ ಶಿಭಿರಗಳನ್ನು ನಡೆಸಿ ಅನುತ್ಪಾದಕ ಜಾನುವಾರುಗಳ ಸೂಕ್ತ ಚಿಕಿತ್ಸೆಗಳನ್ನು ಮಾಡಿ ನಿರಂತರ ಅನುಸರಣೆಯಿಂದ ಈ ರೀತಿಯ ಎಲ್ಲಾ ಜಾನುವಾರುಗಳು ಉತ್ಪಾದಕತೆಯತ್ತ ಸಾಗುವಂತೆ ಮಾಡಲಾಗುವುದು ಎಂದರು.
ಡಾ: ಜಯಪ್ರಕಾಶ್, ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ, ಇವರು ಈ ರೈತರು ಈ ಶಿಬಿರದ ಸದುದ್ದೇಶವನ್ನು ಮಾಡಿಕೊಳ್ಳಲು ರೈತರಿಗೆ ಕರೆ ನೀಡಿದರು. ಜಿಲ್ಲಾ ಪಶುಪಾಲನಾ ಉಪನಿರ್ದೇಶಕ ಡಾ: ಸದಾಶಿವ ಇನ್ನೆರಡು ವರ್ಷಗಳಲ್ಲಿ ರೈತರ ಉತ್ಪನ್ನವನ್ನು ದ್ವಿಗುಣಗೊಳಿಸುವ ಧ್ಯೇಯವು ಪಶುಪಾಲನೆಯಿಂದ ಮಾತ್ರ ಸಾಧ್ಯವೆಂದರು. ಶಿಮುಲ್ ಅಧ್ಯಕ್ಷ ಶ್ರೀ ಆನಂದ್ ಮಾತನಾಡಿ ರೈತರು ಗುಣಮಟ್ಟದ ಹಾಲಿನ ಉತ್ಪಾದನೆಯಲ್ಲಿ ತೊಡಗಬೇಕೆಂದರು.
ಈ ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದ ವಿಷಯ ತಜ್ಞರಾದ ಡಾ:ಎನ್.ಬಿ.ಶ್ರೀಧರ, ಡಾ:ಎ.ಮುರುಗೆಪ್ಪ, ಮತ್ತು ಡಾ: ಜಯಶ್ರಿ ಇವರು ಪಾಲ್ಗೊಂಡರು. ಜಾನುವಾರು ಮತ್ತು ಕರು ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜನಪ್ರತಿನಿಧಿಗಳಾದ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ವನಜಾಕ್ಷಿ ಸುರೇಶ್, ಶಿಮುಲ್ ನಿರ್ದೇಶಕ ಶ್ರೀ ದಿನೇಶ್, ಶ್ರೀ ಬಸವರಾಜಪ್ಪ ಹಾಗೂ ಇನ್ನೂ ಅನೇಕರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ: ಲೋಹಿತೇಶ್ವರ್, ಡಾ: ಕಲ್ಲಪ್ಪ, ಡಾ: ವಿಜಯಕುಮಾರ್, ಡಾ: ಮುರಳಿಧರ್, ಡಾ:ಪ್ರಸನ್ನ, ಡಾ: ಸಿದ್ದೇಶ್ವರ, ಡಾ:ರಮೇಶ್, ಡಾ ಶರತ್ ಇವರು ಭಾಗವಹಿಸಿದರು.