ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ವತಿಯಿಂದ ಹೊಸನಗರದ ಕೃಷಿ ಇಲಾಖೆಯಲ್ಲಿ ದಿನಾಂಕ 27-06-2023 ರಂದು ಕಾಳುಮೆಣಸಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಪದ್ಧತಿ ಬಗ್ಗೆ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಾ . ಹನುಮಂತಸ್ವಾಮಿ ಬಿ. ಸಿ., ಸಹ ವಿಸ್ತರಣಾ ನಿರ್ದೇಶಕರು ಕೆ. ಶಿ. ನಾ. ಕೃ. ತೋ. ವಿ. ವಿ. ಇರುವಕ್ಕಿ ಇವರು ಪಾಲ್ಗೊಂಡು ಕಾಳುಮೆಣಸಿನಲ್ಲಿ ಬರುವ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆಯ ಬಗ್ಗೆ ವಿವರಿಸಿದರು. ಕಾಳುಮೆಣಸಿನಲ್ಲಿ ಪೋಷಕಾಂಶಗಳ ನಿರ್ವಹಣೆ, ಮಣ್ಣುಪರೀಕ್ಷೆ ಯ ಪ್ರಾಮುಖ್ಯತೆ ಮತ್ತು ಹುಳಿಮಣ್ಣಿನ ನಿರ್ವಹಣೆಯ ಬಗ್ಗೆ ಡಾ. ಅಂಜಲಿ ಎಮ್. ಸಿ., ವಿಷಯ ತಜ್ಞರು (ಮಣ್ಣು ವಿಜ್ಞಾನ ) ತಿಳಿಸಿದರು. ಡಾ. ಭರತ್ ಕುಮಾರ್ ಎಂ. ವಿ., ವಿಷಯ ತಜ್ಞರು (ತೋಟಗಾರಿಕೆ) ಇವರು ಕಾಳು ಮೆಣಸು ಬೆಳೆಯ ನಿರ್ವಹಣೆ, ಸಾವಯವ ಗೊಬ್ಬರಗಳ ಬಳಕೆ ಮತ್ತು ಶುಂಠಿ ಬೆಳೆಯ ನಿರ್ವಹಣೆಯ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಹೊಸನಗರ ಕೃಷಿ ಇಲಾಖೆಯ ಡಾ. ಗಣೇಶ್, ಸಹಾಯಕ ಕೃಷಿ ನಿರ್ದೇಶಕರು ಹಾಗು ಶ್ರೀ ಯುತ ಮಾರುತಿ, ಕೃಷಿ ಅಧಿಕಾರಿ, ಉಪಸ್ಥಿತರಿದ್ದರು.
ಗಂಗನಕೊಪ್ಪ, ಗೇರುಪುರ, ಕಳೂರು, ಪುರಪ್ಪೆಮನೆ, ಮಾಸಗಳ್ಳಿ, ಎಂ. ಗೊಡ್ಡಕೊಪ್ಪ ಮತ್ತು ಮೇಲಿನಸಂಪಳ್ಳಿ ಗ್ರಾಮಗಳ ಸುಮಾರು 30 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಂಡರು.