ಶಿವಮೊಗ್ಗ, ಆಗಸ್ಟ್ 12 : ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಡಿ ಬರುವ ನೆಹರು ಯುವ ಕೇಂದ್ರ, ಶಿವಮೊಗ್ಗದ ವತಿಯಿಂದ 2021-22 ನೇ ಸಾಲಿನ ಸ್ವಚ್ಚತಾ ಪಾಕ್ಷಿಕ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆ.1 ರಿಂದ 15 ರವರೆಗೆ ನಡೆಸಲಾಗುತ್ತಿದೆ.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸ್ವಚ್ಚತೆ ಕಾರ್ಯಕ್ರಮಗಳು, ಗೋಡೆಬರಹ ಹಾಗೂ ಸಸಿಗಳನ್ನು ನೆಡುವ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಸ್ವಚ್ಚತಾ ಪಾಕ್ಷಿಕದ ಉದ್ದೇಶವಾಗಿದ್ದು, ಆ.12 ರಂದು ಸಾಗರದ ಉಪವಿಭಾಗೀಯ ಆಸ್ಪತ್ರೆ, ನೆಹರು ಯುವ ಕೇಂದ್ರ ಮತ್ತು ಯುನಿಟಿ ವಿಷನ್ ಸಂಘದ ಸಹಯೋಗದಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಯ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚಗೊಳಿಸಲಾಯಿತು. ಹಾಗೂ ಪಾರ್ಕಿನಲ್ಲಿ ಸಸಿಗಳನ್ನು ನೆಡಲಾಯಿತು.
ಈ ವೇಳೆ ವೈದ್ಯಾಧಿಕಾರಿ ಡಾ. ಪ್ರಕಾಶ್ ಭೋಸ್ಲೆ, ತಾಲ್ಲೂಕು ಆರೋಗ್ಯ ನೌಕರರ ಸಂಘದ ಅಧ್ಯಕ್ಷ ಮೋಹನ್, ಯುನಿಟಿ ವಿಷನ್ ಸಂಘದ ಸುನೀಲ್ ಕುಮಾರ್, ಮೌರಿಸ್ ಸಲಾಡನ್, ಉಪವಿಭಾಗೀಯ ಆಸ್ಪತ್ರೆಯ ಅಧಿಕಾರಿಗಳಾದ ಜುಬೇದ್ ಅಲಿ, ವಸಂತಿ, ಸಿಬ್ಬಂದಿಗಳಾದ ರಜನಿಕಾಂತ್, ಶರಣ್, ಧರಣಿ, ಅರವಿಂದ್ ಹಾಗೂ ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರುಗಳಾದ ಗಿರೀಶ್ ಶೇಟ್, ಪ್ರತೀಕ್ ವಿ.ಭಟ್, ಪೂರ್ವಜ ಉಪಸ್ಥಿತರಿದ್ದರು.
(ಫೋಟೊ ಇದೆ)

error: Content is protected !!