ಕರ್ನಾಟಕ ನಾಟಕ ಅಕಾಡೆಮಿ ಆಯೋಜನೆ | ಹಿರಿಯ ರಂಗಕರ್ಮಿಗಳು ಭಾಗಿ
ಶಿವಮೊಗ್ಗ, ಮಾ. 02ಃ
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಸಾಗರದ ನಮ್ಮ ರಂಗ ಸ್ವರೂಪ ಟ್ರಸ್ಟ್ (ರಿ.) ಹಿರಿಯ ರಂಗ ಕರ್ಮಿಗಳ ರಂಗ ಚಾವಡಿ ವತಿಯಿಂದ ಮಾ. 03ರ ಬೆಳಿಗ್ಗೆ 11 ಗಂಟೆಗೆ ಶ್ರೀನಗರ ಬಡಾವಣೆಯ ನೃತ್ಯ ಭಾಸ್ಕರ ಸಭಾಂಗಣದಲ್ಲಿ ರಂಗಭೂಮಿ ಕುರಿತಾದ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಿರಿಯ ರಂಗ ಕರ್ಮಿ ಸಿ.ಟಿ. ಬ್ರಹ್ಮಾಚಾರ್ರವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಈ ಸಂವಾದ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಜಿ. ಎಸ್. ಭಟ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ವಿಜಯವಾಮನ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಂಗ ಕರ್ಮಿಗಳಾದ ಎಂ.ಎಸ್ ಚಂದ್ರಶೇಖರ್, ಬಿ. ಕೆ. ನಾರಾಯಣ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಸಂವಾದವನ್ನು ಶಿವಮೊಗ್ಗೆಯ ಹಿರಿಯ ರಂಗ ಕರ್ಮಿ, ಪತ್ರಕರ್ತ ವೈದ್ಯ ನಡೆಸಿಕೊಡಲಿದ್ದಾರೆ.
ಸಂವಾದದಲ್ಲಿ ರಂಗ ಕರ್ಮಿಗಳಾದ ಆರ್. ಎಂ. ಬಾಪಟ್, ಗೌರಕ್ಕ, ಪರಮಾತ್ಮ, ಪುರುಷೋತ್ತಮ್ ತಲವಾಟ, ಮಹಾಬಲಗಿರಿ, ಗಣಪತಿ ಕಾಮತ್, ಗುರುಮೂರ್ತಿ ವರದಾಮೂಲ, ರಾಧಾಕೃಷ್ಣ ಬಂದಗದ್ದೆ, ಮಂಜುನಾಥ ಜೇಡಿಕುಣಿ, ದೇವೇಂದ್ರ ಬೆಳೆಯೂರು, ಶೈಲ ಯೇಸು ಪ್ರಕಾಶ್, ಉಷಾರಾಣಿ, ಕೆ.ಜಿ.ಕೃಷ್ಣಮೂರ್ತಿ, ಲಂಬೋದರ, ಯೇಸು ಪ್ರಕಾಶ್, ಪ್ರಭಾಕರ ಸಾಂಶಿ, ಶ್ರೀಪಾದ ಭಾಗವತ್, ಲಂಬೋದರ್, ಮಂಜಪ್ಪ, ಎಂ.ಎಂ.ಕೃಷ್ಣಮೂರ್ತಿ, ಹೆಚ್.ಡಿ.ಕೃಷ್ಣಮೂರ್ತಿ, ಪ್ರಸನ್ನ.ಹೆಚ್.ಎಸ್., ಪ್ರಸನ್ನ ಕುಮಾರ್, ವೀಣಾ ಪ್ರಸನ್ನ ಕುಮಾರ್, ಪದ್ಮಶ್ರೀ, ಗುರುದತ್ತ ವರದಾಮೂಲ, ದೀಪಕ್ ಸಾಗರ್ ಪಾಲ್ಗೊಳ್ಳಲಿದ್ದಾರೆ.
ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪೆÇ್ರ. ಭೀಮಸೇನ ಆರ್., ಸದಸ್ಯರಾದ
ರಾಚಪ್ಪ ಕಾಳಪ್ಪ ಬಡಿಗೇರ್, ರಿಜಿಸ್ಟ್ರಾರ್ ಜಿ. ಮಂಜುನಾಥ್ ಆರಾಧ್ಯ ಕೋರಿದ್ದಾರೆ.