ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ-ಭಾರತÀ ಸರ್ಕಾರದಿಂದ ನೀಡುವ ಅತ್ಯುನ್ನತ ರೈತ ಮತ್ತು ರೈತ/ಬುಡಕಟ್ಟು ಸಮೂದಾಯಗಳಿಗೆ ಕೊಡಮಾಡಲಾಗುವ ರಾಷ್ತೀಯ ಮಟ್ಟದ ಪ್ರಶಸ್ತಿಯಾಗಿದ್ದು, ಪುರಾತನ ನಾಟಿ, ದೇಸಿ ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆ, ಸುಧಾರಣೆ ಮತ್ತು ಹೊಸ ತಳಿ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆಗಳನ್ನು ನೀಡಿದ ರೈತರನ್ನು ಗುರುತಿಸಿ ರಾಷ್ಟ್ರೀಯ ವಂಶವಾಹಿನಿ ನಿಧಿಯಿಂದ ಪ್ರತೀ ವರ್ಷ ಪುರಸ್ಕರಿಸುತ್ತಿದೆ.
ಪ್ರಾಧಿಕಾರವು 2007 ರಿಂದ ಸಸ್ಯ ಸಂಪನ್ಮೂಲಗಳ ಸಂರಕ್ಷಕಾ ಸಮೂದಾಯ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, ಇದು ಹತ್ತು ಲಕ್ಷ ರೂಪಾಯಿನೊಳಗೊಂಡ ಗರಿಷ್ಠ 5 ಪ್ರಶಸ್ತಿಗಳನ್ನು ಒಳಗೊಂಡಿದೆ. ಇದಲ್ಲದೆ 2012-13 ರಿಂದ ಸಸ್ಯತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ರೈತರನ್ನು ಗುರುತಿಸಿ ಸಸ್ಯ ಸಂರಕ್ಷಣಾ ರೈತ ಪ್ರಶಸ್ತಿಯನ್ನು ತಲಾ ಒಂದುವರೆ ಲಕ್ಷ ರೂಪಾಯಿಯಂತೆ ಗರಿಷ್ಠ 10 ರೈತರಿಗೆ ಮತ್ತು ಸಸ್ಯ ತಳಿ ಸಂರಕ್ಷಣಾ ರೈತ ಪುರಸ್ಕಾರವನ್ನು ತಲಾ ಒಂದು ಲಕ್ಷ ರೂಪಾಯಿಯಂತೆ ಗರಿಷ್ಠ 20 ರೈತರಿಗೆ ನೀಡಿ ಪುರಸ್ಕರಿಸುತ್ತಿದೆ.
ಕಳೆದ ವರ್ಷ ಅಂದರೆ, 2018-2019 ಮತ್ತು 2019-2020ನೇ ಸಾಲಿಗೆ ಸಂಬಂದಿಸಿದಂತೆ, ಕರ್ನಾಟಕ ರಾಜ್ಯದ ಸಾಗರದ ಪ್ರಕಾಶ್ ರಾವ್ ಮಂಚಾಲೆ, ಚಿತ್ರದುರ್ಗದ ಕೆ.ಟಿ ವೇದಮೂರ್ತಿ, ಚಿಕ್ಕೊಡಿಯ ಶಿವನಗೌಡ ಪಾಟೀಲ್, ಕೊಡಗಿನ ಪೂನಚ, ಬೀದರ್‍ನ ಮೊಹಮದ್ ಇದ್ರಿಸ್ ಅಹಮದ್ ಕ್ವಾದ್ರಿ, ತುಮಕೂರಿನ ಎಸ್ ಎಸ್ ಪರಮೇಶ್, ಶಿವಮೊಗ್ಗದ ಶ್ರೀನಿವಾಸಮೂರ್ತಿ, ಹೊವಿನ ಹಡಗಲಿಯ ಕಾಟ್ರಳ್ಳಿ ಕಲ್ಲಪ್ಪ ಮತ್ತು ಮಂಡ್ಯದ ಬೊರೇಗೌಡರು ಸೇರಿದಂತೆ ಒಟ್ಟು ಒಂಬತ್ತು ರೈತರು ಸಸ್ಯ ಸಂರಕ್ಷಣಾ ರೈತ ಪ್ರಶಸ್ತಿ ಮತ್ತು ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ, ಆಯ್ಕೆಯಾಗಿ ಪ್ರಶಸ್ತಿ ಪಡೆದಿರುತ್ತಾರೆ. ಇದಲ್ಲದೆ ಹಾಸನದ ಭೂಮಿ ಸುಸ್ತಿರ ಅಭಿವೃದ್ಧಿ ಸಂಸ್ಥೆಯು ಸಸ್ಯ ಸಂಪನ್ಮೂಲಗಳ ಸಂರಕ್ಷಣ ಸಮೂದಾಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಾಧಿಕಾರವು ಪ್ರಸ್ತುತಾ 2020-21 ಮತ್ತು 2021-22ನೇ ಸಾಲಿನ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆ, ಸುಧಾರಣೆ ಮತ್ತು ಹೊಸ ತಳಿ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರೈತ ಮತ್ತು ರೈತ/ಬುಡಕಟ್ಟು ಸಮೂದಾಯಗಳು ದಿನಾಂಕ 27.06.2022ರೊಳಗೆ ಉಪ ನೋಂದಣಾಧಿಕಾರಿಗಳ ಕಛೇರಿ, ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ, ವಿಭಾಗೀಯ ಕಛೇರಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ – 577204 ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ,  ಡಾ. ಅಜಯ್ ಸಿಂಗ್, ಉಪನೋಂದಣಾಧಿಕಾರಿಗಳು (ದೂರವಾಣಿ ಸಂಖ್ಯ- 8876133357), ಜನಾರ್ಧನ ಬಟಾರಿ, ನೋಂದಣಿ ಸಹಾಯಕರು (ದೂರವಾಣಿ ಸಂಖ್ಯ-8722411091) ಇವರನ್ನು ಸಂಪರ್ಕಿಸಬಹುದು. ಅರ್ಜಿ ಮತ್ತು ಇತರೆ ಮಾಹಿತಿಯನ್ನು ವೆಬ್ ಸೈಟ್ ವಿಳಾಸ: www.plantauthority.gov.in ಯಿಂದ ಪಡೆಯಬಹುದು.

error: Content is protected !!