ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಕಾರೇಹಳ್ಳಿಯಲ್ಲಿ ದಿನಾಂಕ: 10-2-2023 ರಂದು ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೂಜ್ಯ ಸದ್ಗುರುಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಆಗಮಿಸಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತು. ಶ್ರೀ ಶ್ರೀ ವಿಶ್ವದೇವಾನಂದ ಸ್ವಾಮೀಜಿ ಅವರು ಪಾಲ್ಗೊಂಡಿದ್ದರು. ಪೂಜ್ಯ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ ಶಾರದ ಮಾತೆಯ ಅನುಗ್ರಹದಿಂದ ವಿದ್ಯಾರ್ಥಿಗಳು ಏಕಾಗ್ರತೆ ಪಡೆಯಲು ಸಾಧ್ಯ ಎಂದು ಹೇಳಿದರು.

ನಮ್ಮ ಸಂಸ್ಕೃತಿಯಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳನ್ನು ನೀಡುವ ಸರಸ್ವತಿಯ ಕೃಪಾಕಟಾಕ್ಷ ವಿದ್ಯಾರ್ಥಿಗಳೆಲ್ಲರ ಮೇಲೆ ಉಂಟಾಗಲಿ ಹಾಗೂ ಹತ್ತನೆಯ ತರಗತಿಯ ಫಲಿತಾಂಶ ಉತ್ತಮವಾಗಿ ಬರಲಿ ಎಂದು ಆಶೀರ್ವಾದ ಮಾಡುವುದರ ಮೂಲಕ ಆಶೀರ್ವಚನ ನೀಡಿದರು. ವೀಣವಾದನವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ವಿದ್ಯಾರ್ಥಿಗಳಾದ 7ನೇ ತರಗತಿಯ ಅನಘ, ಎಂಟನೇ ತರಗತಿಯ ವಿದ್ಯಾರ್ಥಿಗಳಾದ ತನುಶ್ರೀ ಮತ್ತು ಆದರ್ಶರವರುಗಳು ವೀಣೆಯನ್ನು ನುಡಿಸಿದರು. ವಾಗ್ದೇವಿಯ ಕೈಯಲ್ಲಿರುವ ಜಪಮಾಲೆ, ಗ್ರಂಥಗಳ ಮಹತ್ವವನ್ನು ಕುರಿತು ಪೂರ್ಣಪ್ರಜ್ಞ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ವಿನಿತ್ ಆನಂದ್ ರವರು ಮಾತನಾಡಿದರು.

ಪ್ರಶಾಂತಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಶ್ರೀಯುತ ಪ್ರಭಾಕರ್ ಭೈರಯ್ಯ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವಲಿಂಗೇಗೌಡರು, ಶ್ರೀಯುತ ಕಾಳೇಗೌಡರು, ಕಾರ್ಯದರ್ಶಿಗಳು, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಶ್ರೀಯುತ ರಮೇಶ್ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರು, ಸರಸ್ವತಿದೇವಿಯು ಶ್ವೇತವಸ್ತ್ರಧಾರಿಯಾಗಿ ಮತ್ತು ಪದ್ಮಾಸನಸ್ಥೆಯಾಗಿ ಕುಳಿತಿರುವ ಮಹತ್ವವನ್ನು ಜಾವಳ್ಳಿ ಅರಬಿಂದೊ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಾಗರಾಜ್ ರಾವ್ ರವರು ಮಾತನಾಡಿದರು

ಸಮಾಜ ಸೇವಕರಾದ ಶ್ರೀಯುತ ನರಸಿಂಹಾಚಾರ್, ಶಾಲಾ ಆಡಳಿತ ಅಧಿಕಾರಿಗಳಾದ ಶ್ರೀಯುತ ಜಗದೀಶ  ಬಿ. ಬಿ ಜಿ ಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಾ. ಅಮುದಾ ಸಿ ಮುನಿರಾಜ್, ಉಪ ಪ್ರಾಂಶುಪಾಲರಾದ ವೀರರಾಜೇಂದ್ರ ಸ್ವಾಮಿ ಎ ಎಂ, ಮುಖ್ಯೋಪಾಧ್ಯಾಯನಿ ದಿವ್ಯ ಕೆ ಎನ್ ರವರು ಶ್ರೀಯುತ ರವಿಕುಮಾರ್, ಮುಖ್ಯೋಪಾಧ್ಯಾಯರು ಎಸ್ ಎ ಇ ಆಂಗ್ಲ ಪ್ರೌಢಶಾಲೆ , ಕಾರೇಹಳ್ಳಿ,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!