ಶಿವಮೊಗ್ಗ : ಭಾವಸಾರ ವಿಜನ್‌ ಇಂಡಿಯಾ, ಸರ್ಜಿ ಫೌಂಡೇಶನ್‌, ಉಡುಪಿ ಪ್ರಸಾದ್‌ ನೇತ್ರಾಲಯ ಹಾಗೂ ಡೆಂಟಲ್‌ ಅಸೋಷಿಯೇಷನ್‌ ಶಿವಮೊಗ್ಗ ಘಟಕದ ಸಂಯುಕ್ತಾಶ್ರಯದಲ್ಲಿ ಪಿಳ್ಳಂಗಿರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ನೂರಾರು ಮಕ್ಕಳಿಗೆ ಗುರುವಾರ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಡಾ.ಸಜ್ಜಿನಾ, ಡಾ.ರಶ್ಮಿ, ಡಾ.ಗುರುಪ್ರಸಾದ್‌ ಅವರು 450 ಮಕ್ಕಳಿಗೆ ಉಚಿತ ತಪಾಸಣೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು. ಸರ್ಜಿ ಆಸ್ಪತ್ರೆಯ ದಾದಿಯರು ಸೇವೆ ಸಲ್ಲಿಸಿದರು. ಈ ಸಂದರ್ಭ ಪತ್ರಕರ್ತ ಗೋ.ವ. ಮೋಹನ್‌ ಕೃಷ್ಣ, ಭಾವಸಾರ ವಿಜನ್‌ ಇಂಡಿಯಾದ ಅಧ್ಯಕ್ಷರಾದ ಪ್ರಭಾಕರ್‌, ಕಾರ್ಯದರ್ಶಿ ಸಚಿನ್‌ ಬೇದ್ರೆ, ವುಮೆನ್‌ ವೆಲ್ಫೇರ್‌ ಘಟಕದ ನಿರ್ದೇಶಕಿ ಮಮತಾ ಕಮಲಾಕರ್‌, ಉಪಾಧ್ಯಕ್ಷೆ ಸ್ವಪ್ನ ಹರೀಶ್‌, ಡಾ.ಸಾತ್ವಿಕ್‌, ಡಾ.ವಿಕ್ರಮ್‌, ವಾಣಿ ಮತ್ತಿತರರು ಹಾಜರಿದ್ದರು.

error: Content is protected !!