ಶಿವಮೊಗ್ಗ: ಭದ್ರಾವತಿ ಶಾಸಕ ಸಂಗಮೇಶ್ವರ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನ ನೀಡುವಂತೆ ಶಿವಮೊಗ್ಗ ಜಿಲ್ಲೆಯ ಸಂಘಟನೆಗಳು ಹಾಗೂ ಗಾಣಿಗಾ ಸಮುದಾಯ ಒತ್ತಾಯಿಸಿದೆ.
ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆ ಪುನಾರಾರಂಭ ಹಾಗೂ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಜಿಲ್ಲೆಯ ಹಾಗೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಂಗಮೇಶ್ ಅವರು ಸಚಿವರಾಗುವುದು ಸೂಕ್ತ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬಿ.ಕೆ.ಸಂಗಮೇಶ್ವರ ಅವರು ಎಲ್ಲಾ ಸಮುದಾಯದ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಾರೆ. ಅವರ ಸಚಿವ ಸ್ಥಾನ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸುವ ಶಕ್ತಿ ಇವರಲ್ಲಿದೆ. ಇವರನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಎಲ್ಲಾ ಸಮುದಾಯದವರು ಒತ್ತಾಯಿಸಿದ್ದಾರೆ.
ಸಂಗಮೇಶ್ವರ ಅವರನ್ನು ಗೆಲ್ಲಿಸಿ ಕಳಿಸಿದರೆ ಮoತ್ರಿ ಪದವಿ ನೀಡುವ ಭರವಸೆಯನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೀಡಿದ್ದರು. ಅದರಂತೆ ಅವರು ನಡೆದುಕೊಳ್ಳಬೇಕು ಎಂದು ಸಮುದಾಯದ ಒತ್ತಾಸೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಸಂಗಮೇಶ್ವರ ಅವರಿಗೆ ನಮ್ಮ ಸಮುದಾಯ ಸಹಕಾರ ನೀಡುತ್ತದೆ ಎಂದು ಸಮುದಾಯದ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲಾ ಕ್ಷೇತ್ರ‍್ರಾಭಿವೃದ್ಧಿ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಗಾಣಿಗ ಸಮಾಜ ವಿಶ್ವಾಸ ವ್ಯಕ್ತಪಡಿಸಿದೆ.
ಭದ್ರಾವತಿ ತಾಲೂಕಿನ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಹಾಗೂ ಗಾಣಿಗ ಸಮಾಜದ ಎಂ.ನಾಗರಾಜ್ ಮತ್ತು ಇತರ ಸಂಘ ಸಂಸ್ಥೆಗಳು ಒತ್ತಾಯಿಸಿವೆ.
ಪದಾಧಿಕಾರಿಗಳಾದ ಜಿ.ವಿಜಯಕುಮಾರ್, ಕಿರಣ್, ಅಶೋಕ್ ಎ, ಮಂಜಪ್ಪ ಸಜ್ಜನ್ ಶೆಟ್ಟರ್, ಲಿಂಗರಾಜ್, ರವೀಶ್, ರವಿ, ಮಲ್ಲಿಕಾರ್ಜುನ ಕಾನೂರ್, ಸುಮನಾ, ನಾಗರಾಜ್ ಎಂ, ಎಚ್ ಸುಬ್ಬಯ್ಯ, ಮಂಜುನಾಥ್, ಶಿವಕುಮಾರ್, ನಾಗೇಶ್ ಜನಾರ್ಧನ್, ಮಂಜುನಾಥ್ ಸೇರಿದಂತೆ ಇತರರಿದ್ದರು.