ಶಿವಮೊಗ್ಗ : ಜೂನ್ 15 : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರಸಕ್ತ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಗೆ ಪ್ರಶಸ್ತಿಗಳನ್ನು ಘೋಷಿಸಿದೆ.
ಲೇಖಕರು ಪ್ರಶಸ್ತಿಗಾಗಿ ಸಲ್ಲಿಸಿದ ಪ್ರಕಟಣೆಗಳನ್ನು ಆಯಾ ಕ್ಷೇತ್ರದ ತಜ್ಞರಿಂದ ಮೌಲ್ಯಮಾಪನ ಮಾಡಿಸಿ, ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಲೇಖಕರಿಗೆ ಜುಲೈ ಮಾಸಾಂತ್ಯದಲ್ಲಿ ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಡಾ.ಟಿ.ಎಸ್.ಚನ್ನೇಶ್ ಅವರು ಬರೆದ ಅನುರಣ ವಿಜ್ಞಾನ ಪ್ರಬಂಧಗಳ ಕೃತಿಗೆ ಶ್ರೇಷ್ಠ ವಿಜ್ಞಾನ ಪುಸ್ತಕ ಪ್ರಶಸ್ತಿ, ಶ್ರೀಮತಿ ಸಿ.ತ್ರಿವೇಣಿ ಅವರು ರಚಿಸಿದ ಮಣ್ಣು-ಉಸಿರಾಡುವ ಜೀವವಸ್ತು ಎಂಬ ವಿಜ್ಞಾನ ಕೃತಿಗೆ ಶ್ರೇಷ್ಠ ಪುಸ್ತಕ ಪ್ರಶಸ್ತಿ, ಡಾ.ಉದಯಶಂಕರ ಪುರಾಣಿಕ್ ಅವರು ಬರೆದ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ – ಹೊಸ ತಂತ್ರಜ್ಞಾನ ಹೊಸ ಅವಕಾಶಗಳು ಎಂಬ ತಂತ್ರಜ್ಞಾನಾಧಾರಿತ ಕೃತಿಗೆ ಹಾಗೂ ಪ್ರೊ.ಮಹದೇವಯ್ಯ ಅವರು ರಚಿಸಿದ ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ ಎಂಬ ತಂತ್ರಜ್ಞಾನಾಧಾರಿತ ಕೃತಿಗೆ ಹಾಗೂ ಡಾ.ರಣಜಿತ ಬೀರಣ್ಣ ನಾಯಕ ಅವರು ರಚಿಸಿದ ವೈದ್ಯ-ವಿಜ್ಞಾನ ಕೃತಿ ಹಾಗೂ ಡಾ||ಮುರಲೀಮೋಹನ್ ಚೂಂತಾರು ಅವರು ರಚಿಸಿದ ಸಂಜೀವಿನಿ-ಆರೋಗ್ಯ ಮಾರ್ಗದರ್ಶಿ ಎಂಬ ವೈದ್ಯಕೀಯ ಕೃತಿಗೆ ಶ್ರೇಷ್ಠ ಪುಸ್ತಕ ಪ್ರಶಸ್ತಿ ಲಭಿಸಿದೆ.

error: Content is protected !!