ಐ.ಸಿ.ಎ.ಆರ್.–ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದಲ್ಲಿ ಹತ್ತು ದಿನಗಳ ಕಾಲ ‘ಶುಂಠಿಯಲ್ಲಿ ಮೌಲ್ಯವರ್ಧನೆ’ ಕುರಿತು ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ.ಸಿ. ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರು ನೆರೆವೇರಿಸಿ ತರಬೇತಿ ಕಾರ್ಯಕ್ರಮದ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಿಸಿದರು.

ತದನಂತರ ಈ ತರಬೇತಿ ಕಾರ್ಯಕ್ರಮದ ಸಂಘಟಕರಾದ ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ) ರವರು ಕಾರ್ಯಕ್ರಮದ ಹತ್ತು ದಿನಗಳ ರೂಪುರೇಷೆಯನ್ನು ತಿಳಿಸಿಕೊಟ್ಟರು. ಮುಖ್ಯವಾಗಿ ಇದರಲ್ಲಿ ಶುಂಠಿಯ ಬೇಸಾಯ ಕ್ರಮಗಳು, ಮಣ್ಣು, ರೋಗ ಮತ್ತು ಕೀಟಗಳ ಹತೋಟಿ ಕ್ರಮಗಳು, ಶುಂಠಿಯ ಪೋಷಕಾಂಶ ಮತ್ತು ಔಷಧೀಯ ಗುಣಗಳು, ಆಹಾರ ಸಂರಕ್ಷಣೆ, ಸಣ್ಣ ಕೈಗಾರಿಕೆ, ತೋಟಗಾರಿಕೆ ಮತ್ತು ಶುಂಠಿ ಬೆಳೆಗೆ ಸರ್ಕಾರದಿಂದ ದೊರೆಯುವ ಸಹಾಯ ಮತ್ತು ಸೌಲಭ್ಯಗಳು ಹೀಗೆ ಹಲವಾರು ಅಧಿಕಾರಿಗಳು ಮತ್ತು ವಿಜ್ಞಾನಿಗಳಿಂದ ಬೋಧನಾತ್ಮಕವಾಗಿ ತಿಳಿಸಲಾಯಿತು.

ಶುಂಠಿ ಜ್ಯೂಸ್, ಶುಂಠಿ ಕ್ಯಾಂಡಿ, ಶುಂಠಿ ಉಪ್ಪಿನಕಾಯಿ, ಶುಂಠಿ ಚಾಟ್, ಶುಂಠಿ ಪೇಸ್ಟ್, ಶುಂಠಿ ಕಷಾಯ, ಶುಂಠಿ ಸಿರಪ್, ಶುಂಠಿ ಚಟ್ನಿ, ಶುಂಠಿ ಹಲ್ವಾ, ಶುಂಠಿ ಗೊಜ್ಜು ಇತ್ಯಾದಿಗಳನ್ನು ಪ್ರಾಯೋಗಾತ್ಮಕವಾಗಿ ಶಿಬಿರಾರ್ಥಿಗಳಿಗೆ ತಯಾರಿಸಿ, ಸವಿಯಲು ನೀಡಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ, ಶುಂಠಿಯ ಸಂಸ್ಕರಣಾ ಘಟಕಗಳಿಗೆ ಮತ್ತು ಶೇಖರಣಾ ಘಟಕಗಳಿಗೆ ಕ್ಷೇತ್ರ ಭೇಟಿ ಹಾಗೂ ಅಧ್ಯಯನ ಪ್ರವಾಸಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು.

error: Content is protected !!