ಶಿವಮೊಗ್ಗ : ನಾವು ನಿತ್ಯ ಸೇವಿಸುವ ಆಹಾರ ಸತ್ವಯುತವಾಗಿದೆಯೇ? ಇಂತಹ ಒಂದು ಪ್ರಶ್ನೆ ಹಾಕಿದರೆ ಹೌದು ಎಂಬ ಉತ್ತರ ಬರುವುದು ಕಷ್ಟವೇ. ಏಕೆಂದರೆ ನಮ್ಮೆಲ್ಲರ ಬಿಡುವಿಲ್ಲದ ಬದುಕಿನಲ್ಲಿ ಪೌಷ್ಟಿಕಾಂಶಭರಿತ ಆಹಾರವನ್ನು ಮರೆತೇಬಿಟ್ಟಿದ್ದೇವೆ. ಸಿದ್ಧ ಆಹಾರ, ಎಣ್ಣೆ ಪದಾರ್ಥಗಳು ಹಾಗೂ ಸತ್ವರಹಿತ ತಿನಿಸು ಸೇವಿಸಿ ನಮ್ಮ ಆರೋಗ್ಯದ ಮೇಲೆ ನಾವೇ ಕಲ್ಲುಹಾಕಿಕೊಳ್ಳುತ್ತಿದ್ದೇವೆ.

ಹಸಿವಾದಾಗಲೆಲ್ಲ ನಾವು ಸೇವಿಸುತ್ತಿರುವ ಆಹಾರದಲ್ಲಿ ಸತ್ವವಿಲ್ಲ. ಅಷ್ಟೇ ಅಲ್ಲ ಮಕ್ಕಳು ಕೇಳಿದರೆಂದು ಹಿಂದೆ-ಮುಂದೆ ಯೋಚಿಸದೆ ತಿನಿಸು ಕೊಡಿಸುತ್ತೇವೆ. ಪರಿಣಾಮ ಅಪೌಷ್ಟಿಕತೆ ಉದ್ಭವ.

ನಾವು ಬಳಸುವ ನಿರ್ಲಕ್ಷ್ಯದ ಆಹಾರ ಫಲವಾಗಿ ಹೃದಯ ಕಾಯಿಲೆ, ಕ್ಯಾನ್ಸರ್, ಮತ್ತು ಮಧುಮೇಹದಂತಹ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಆವರಿಸಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಸಲಹೆ ನೀಡುವ ಸಲುವಾಗಿ ನಗರದ ಸವಳಂಗ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಮುಂಭಾಗ ಇರುವ ಭೂಪಾಳಂ ಡ್ರಗ್‌ಹೌಸ್ ಬಿಲ್ಡಿಂಗ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆ ವಿಷಯದಲ್ಲಿ ಪರಿಣಿತಿ ಪಡೆದಿರುವ ಆಹಾರ ಮತ್ತು ಪೌಷ್ಟಿಕ ತಜ್ಞೆ ಡಾ.ದೀಕ್ಷಾನಾಯ್ಕ್ ಅವರ ಸಾರಥ್ಯದಲ್ಲಿ ಜೂ.೨೮ ರಂದು ದೀಕ್ಷಾ ಡಯಟ್ ಕ್ಲಿನಿಕ್ ನೂತನವಾಗಿ ಶುಭಾರಂಭವಾಗಲಿದೆ.

ಅಂದು ಬೆಳ್ಳಗೆ ೧೧ ಗಂಟೆಗೆ ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮುಖ್ಯಅತಿಥಿಗಳಾಗಿ ಭಾಗವಹಿಸಲ್ಲಿದ್ದಾರೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಗ್ರಾಮಾಂತರ ಶಾಸಕಿ ಶಾರದಾಪೂರ‍್ಯನಾಯ್ಕ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್. ಐಎಂಎ ಯ ಅಧ್ಯಕ್ಷ ಡಾ. ಅರುಣ್ ಎಂ.ಎಸ್, ಕಾರ್ಯದರ್ಶಿ ರಕ್ಷಾರಾವ್ ಅತಿಥಿಗಳಾಗಿ ಉಪಸ್ಥಿತರಿರುವರು.

ಈ ಒಂದು ವಿಶೇಷ ಕಾರ್ಯಕ್ರಮಕ್ಕೆ ಸರ್ವರು ಭಾಗವಹಿಸುವಂತೆ ಆಹಾರ ಮತ್ತು ಪೌಷ್ಟಿಕ ತಜ್ಞೆ ಡಾ.ದೀಕ್ಷಾನಾಯ್ಕ್ ಕೋರಿದ್ದಾರೆ.

error: Content is protected !!