ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಯ ತಾಂತ್ರಿಕ ಮತ್ತು ತಾಂತ್ರಿಕೇತರ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಾಲ್ಯಭಿವೃದ್ಧಿ ಸೌಲಭ್ಯ ಒದಗಿಸಲು ಈಗಾಗಲೇ ದಾಂಡೇಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿ ಫಾರ್ ಸ್ಕಿಲ್ ಡೆವೆಲಪ್‍ಮೆಂಟ್ ಮಾದರಿಯಲ್ಲಿ ಶಿವಮೊಗ್ಗ ನಗರದಲ್ಲಿಯೂ ಸಹ ಈ ಭಾಗದ ಉನ್ನತÀ ಶಿಕ್ಷಣ ಪಡೆದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೌಶಾಲ್ಯಾಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡುವಂತೆ ಕರ್ನಾಟಕ ಸರ್ಕಾರದ ಉಪ ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಮತ್ತು ಐ.ಟಿ.ಬಿ.ಟಿ. ಸಚಿವರೂ ಆದ ಸನ್ಮಾನ್ಯ ಶ್ರೀ ಡಾ. ಸಿ.ಎಸ್. ಅಶ್ವಥನಾರಾಯಣರವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು ಹಾಗೂ ಈ ಬಗ್ಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತ ವತಿಯಿಂದ ದೊರಕಿಸಿಕೊಡಲಾಗುವುದೆಂಬುದನ್ನು ಸಹ ತಿಳಿಸಲಾಯಿತು. ಮನವಿಯ ಬಗ್ಗೆ ಪರಿಶೀಲಿಸಿದ ಸನ್ಮಾನ್ಯ ಸಚಿವರು ಆದಷ್ಟು ಬೇಗನೆ ಶಿವಮೊಗ್ಗದಲ್ಲಿ ಕೌಶಾಲ್ಯಭಿವೃದ್ಧಿ ಕೇಂದ್ರ ಸ್ಥಾಪನೆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿರುತ್ತಾರೆ.
ಈ ಸಭೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿಗಳು, ಶಿವಮೊಗ್ಗ ಜಿಲ್ಲಾಧಿಕಾರಿಗಳು, ಮುಖ್ಯ ಮಂತ್ರಿಗಳ ವಿಶೇಷಾಧಿಕಾರಿ ಶ್ರೀ ಶ್ರೀಧರಮೂರ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

  • ಬಿ.ವೈ. ರಾಘವೇಂದ್ರ
    ಸಂಸದರು, ಶಿವಮೊಗ್ಗ
error: Content is protected !!