ಶಿವಮೊಗ್ಗ ನಗರದ ಎಮ್.ಇ.ಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯ ಪ್ರತಿಭಾನ್ವಿತ ನಿರುದ್ಯೋಗಿಗಳು ವಿಕಲಚೇತನರು ಹಾಗೂ ಯುವಕ ಮತ್ತು ಯುವತಿಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೊದಲನೇ ದಿನದ ಉದ್ಯೋಗ ಮೇಳದಲ್ಲಿ ರಾಜ್ಯದ ಪ್ರತಿಷ್ಠಿತ ದೇಶ-ವಿದೇಶ ಕಂಪನಿಗಳು, ಬೆಂಗಳೂರಿನ ಪ್ರಮುಖ ಕಂಪನಿಗಳು, ಸಣ್ಣಕೈಗಾರಿಕೆಗಳು, ಸಾಫ್ಟ್ವೇರ್, ಉತ್ಪಾದನಾ ವಲಯದ ಕಂಪನಿ, ಅಪ್ರೆಂಟಿಸ್ ತರಬೇತಿ ನೀಡುವ ಕಂಪನಿಗಳು, ಕೃಷಿಯಾಧಾರಿತ ಕಂಪನಿಗಳು ಸೇರಿ 150ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು.
ನಗರದ ಕುವೆಂಪು ರಂಗಮಂದಿರ ಹಿಂಭಾಗದ ಎನ್ .ಇ. ಎಸ್ ಮೈದಾನದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ಈ ಉದ್ಯೋಗಮೇಳದಲ್ಲಿ ಈಗಾಗಲೇ ಅನೇಕ ಉದ್ಯೋಗಾಕಾಂಕ್ಷಿಗಳು ಕೆಲಸ ಪಡೆದಿದ್ದು ನೂರಾರು ಜನರು ನಾಳೆಯೂ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.
ಕಳೆದ ಜನವರಿ ತಿಂಗಳಿನಿಂದ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ವೆಬ್ ತೆರೆಯಲಾಗಿತ್ತು.ಇದುವರೆಗೂ ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಇಂದು ಸಹ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು ಉದ್ಯೋಗಾಕಾಂಕ್ಷಿಗಳಿಗೆ ಸಹಾಯವಾಯಿತು.
ಸೂಕ್ತ ವ್ಯವಸ್ಥೆ:-
ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಹರಿದು ಬಂದ ಹಿನ್ನೆಲೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು. ಅವರಿಗೆ ಚೇರ್ ವ್ಯವಸ್ಥೆ, ದೊಡ್ಡ ಪೆಂಡಲ್, ಕುಡಿಯುವ ನೀರು, ಊಟ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲಾಯಿತು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಕಂಪನಿಗಳ ಅವಶ್ಯಕತೆಗಳ ಮಾಹಿತಿಯನ್ನು ಉದ್ಯೋಗ ಮೇಳದಲ್ಲಿ ಪರದೆಗಳಲ್ಲಿ ಪ್ರದರ್ಶಿಸಲಾಯಿತು.