ಶಿವಮೊಗ್ಗ ನಗರದ ನೂತನ ಶಾಸಕರಾದ ಚನ್ನಬಸಪ್ಪ (ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇವಲ 21 ದಿನಗಳಲ್ಲಿ ಚುನಾವಣೆಯನ್ನು ಮುಗಿಸಿ ಶಾಸಕನಾಗಿ ನಿಮ್ಮ ಮುಂದೆ ಬಂದಿದ್ದೇನೆ ಈ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿಗೆ ಬಹುಮತವನ್ನು ತಂದು ಕೊಟ್ಟಂತಹ ಮತದಾರರಿಗೆ ಹೃತ್ಪೂರ್ವಕವಾದ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ
ಮತದಾನ ಪ್ರಭುಗಳು ಮತವನ್ನು ದಾನ ಮಾಡುವುದರ ಮೂಲಕ ಭಾರತೀಯ ಜನತಾ ಪಾರ್ಟಿಗೆ ಆಶೀರ್ವಾದವನ್ನು ಮಾಡಿದ್ದಾರೆ ಆ ದಾನವನ್ನು ಸ್ವೀಕರಿಸಿದ ಭಾರತೀಯ ಜನತಾ ಪಾರ್ಟಿ ದಾನವನ್ನು ಕೊಟ್ಟಂತಹ ಮತದಾರರಿಗೆ ಅವರ ನಂಬಿಕೆಗೆ ಯಾವುದೇ ರೀತಿಯ ಚುತಿ ಬರದಂತೆ ನಡೆದುಕೊಳ್ಳುತ್ತೇನೆ ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿಯಾಗಿದೆ ಸಾಕಷ್ಟು ಕಾರ್ಯಕರ್ತರು ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೆ ಸಂಘ ಪರಿವಾರದ ಕಾರ್ಯಕರ್ತರು ಸ್ವಯಂಸೇವಕರು ಎಲ್ಲರೂ ಕೂಡ ಈ ಚುನಾವಣೆಯಲ್ಲಿ ಗೆಲುವಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ ಆದ್ದರಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಭಾವಿಸುತ್ತೇನೆ ವಿಚಾರಕ್ಕೆ ಸಿಕ್ಕಂತಹ ಗೆಲುವು ಮತ್ತು ಅಭಿವೃದ್ಧಿಗೆ ಸಿಕ್ಕಂತಹ ಗೆಲುವು ಈ ಗೆಲುವಿನ ಒಟ್ಟು ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯವನ್ನು ಮಾಡುತ್ತೇನೆ
ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿ ಇರುವಂತಹ ಎಲ್ಲ ನಾಯಕರುಗಳು ಕೂಡ ಶಕ್ತಿಯನ್ನು ತಂದುಕೊಟ್ಟಿದ್ದಾರೆ ಇವರೆಲ್ಲರಿಗೂ ಕೂಡ ನನ್ನ ಹಾರ್ದಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ
ನಾನೊಬ್ಬ ಶಾಸಕನಾಗಿ ತಮ್ಮ ಮುಂದೆ ನಿಂತಿದ್ದೇನೆ ಶಾಸಕನಾಗಿ ಎಂದು ಹೇಳುವುದಕ್ಕಿಂತ ಶಿವಮೊಗ್ಗದ ಸೇವಕನಾಗಿ ಕಾರ್ಯವನ್ನು ಮಾಡಬೇಕು ಎಂದು ಯೋಚನೆ ಮಾಡಿದ್ದೇನೆ ಶಾಸಕ ಸ್ಥಾನ ನಿಮಿತ್ತ ಮಾತ್ರ ಸೇವಕ ಸ್ವಯಂಸೇವಕ ಎನ್ನುವುದು ಬಹಳ ಮಹತ್ವಪೂರ್ಣವಾದ ಕಾರ್ಯ ಎಂದು ಭಾವಿಸಿದ್ದೇನೆ ಹಾಗಾಗಿ ಸ್ವಯಂ ಸೇವಕನಾಗಿ ಶಿವಮೊಗ್ಗದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯವನ್ನು ಮಾಡುತ್ತೇನೆ ಸಂಘಟನೆಯನ್ನು ಜೊತೆಯಲ್ಲಿ ತೆಗೆದು ಕೊಂಡು ಶಿವಮೊಗ್ಗ ನಗರದ ನಾಗರೀಕರ ಎಲ್ಲಾ ಸಲಹೆ ಸಹಕಾರ ಸೂಚನೆಗಳನ್ನು ತೆಗೆದುಕೊಂಡು ಕಾರ್ಯವನ್ನು ಮುಂದುವರಿಸುತ್ತೇನೆ
ಒಟ್ಟಾರೆ ಗೆಲುವು ತುಂಬ ಸಂತೋಷ ತಂದಿದೆ ಈ ಗೆಲುವಿನ ಮೂಲಕ ಶಿವಮೊಗ್ಗ ನಗರವನ್ನು ಅತ್ಯಂತ ಸುಂದರವಾಗಿ ಸಾಂಸ್ಕೃತಿಕ ಕೇಂದ್ರವಾಗಿ ಜನಪರ ಆಡಳಿತವನ್ನು ಕೊಡಲಿಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಮುನ್ನಡೆಯುತ್ತೇನೆ
ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಮತಗಳನ್ನು ಪಡೆಯಬೇಕು ಅಂದುಕೊಂಡಿದ್ದೆವೋ ಅದಕ್ಕೆ ಹತ್ತಿರವಾಗಿ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ ಶಿವಮೊಗ್ಗ ನಗರದ ಜನರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ