“ವೈಜ್ಞಾನಿಕ ಕುರಿ ಮತ್ತು ಮೇಕೆ ¸ಕುರಿ ಮತ್ತು ಮೇಕೆ ಸಾಕಾಣಿಕೆಯು ಇತ್ತೀಚೆಗೆ ಮಲೆನಾಡಿನ ಭಾಗದಲ್ಲೂ ಹೆಚ್ಚು ಪ್ರಚಲಿತದಲ್ಲಿದ್ದು ಅದಕ್ಕೆ ಮುಖ್ಯ ಕಾರಣ ಕಡಿಮೆಯಾಗಿರುವ ಮಳೆ ಮತ್ತು ಹವಾಮಾನ ವೈಪರೀತ್ಯ. ಈ ರೀತಿಯ ಬದಲಾದ ಪರಿಸ್ಥಿತಿಗನುಗುಣವಾಗಿ ಲಾಭದಾಯಕವಾಗಬಲ್ಲ ಕುರಿ ಮತ್ತು ಮೇಕೆ ಸಾಕಾಣಿಕೆಯು ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ರೈತಾಪಿ ವರ್ಗಕ್ಕೆ ಆಶಾಕಿರಣವಾಗಬಲ್ಲದು ಎಂದು ಡಾ. ಆರ್. ನಾಗರಾಜ್, ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ ಇವರು ಅಭಿಪ್ರಾಯ ಪಟ್ಟರು. ಇವರು 26-06-2019 ಮತ್ತು 27-06-2019 ರಂದು ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ” ಕುರಿತ ಸಮಾಜ ಕಲ್ಯಾಣ ಇಲಾಖೆಯ ಪ್ರಾಯೋಜಿತ ಎರಡು ದಿನಗಳÀ ಉಚಿತ ತರಬೇತಿ ಕಾರ್ಯಕ್ರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್ರವರಾದ ಡಾ. ಪ್ರಕಾಶ್ ನಡೂರ್ರವರು ಮಾತನಾಡಿ ಹೆಚ್ಚುತ್ತಿರುವ ಮಾಂಸಾಹಾರದ ಬೇಡಿಕೆ ಸಹಜವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಯೆಡೆಗೆ ರೈತರನ್ನಷ್ಟೇ ಅಲ್ಲದೇ ಉದ್ಯಮಿಗಳನ್ನೂ ಆಕರ್ಷಿಸುತ್ತಿದ್ದು, ಪಶು ಸಂಗೋಪನೆಯ ಬೆಳವಣಿಗೆಗೆ ಪೂರಕ ಅಂಶ ಎಂದರು. ಇದೇ ಸಮಯದಲ್ಲಿ ವಿಭಾಗದ ವತಿಯಿಂದ ಹೊರತರಲಾದ ‘ಜಾನುವಾರುಗಳಿಗೆ ಸಂಪೂರ್ಣ ಆಹಾರ ತಯಾರಿಕೆ’ ಎಂಬ ಹಸ್ತ ಪ್ರತಿ ಬಿಡುಗಡೆಗೊಳಿಸಲಾಯಿತು. ರಾಜ್ಯ ವಿವಿಧ ಜಿಲ್ಲೆಗಳ ಸುಮಾರು 50 ಜನ ಭಾಗವಹಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನಿರ್ದೇಶಕರಾಗಿ ಡಾ. ವೆಂಕಟೇಶ್.ಎಮ್.ಎಮ್, ಸಂಯೋಜಕರಾಗಿ ಡಾ.ಸತೀಶ್.ಜಿ.ಎಮ್ ಮತ್ತು ವಿವಿಧ ವಿಭಾಗಗಳ ಸಂಪನ್ನೂಲ ವ್ಯಕ್ತಿಗಳು ಡಾ.ತಿರುಮಲೇಶ್.ಟಿ, ಡಾ.ನಾಗಭೂಷಣ್.ವಿ, ಡಾ.ಉಮೇಶ್.ಬಿ.ಯು., ಡಾ.ಭರತ್ ಭೂಷಣ್.ಎಮ್, ಡಾ.ಚಿದಾನಂದಯ್ಯ,ಡಾ.ಜಯಶ್ರೀ.ಆರ್, ಡಾ. ಪ್ರದೀಪ್, ಡಾ.ಕೃಷ್ಣಮೂರ್ತಿ.ಟಿ.ಎನ್, ಡಾ.ಮಂಜುನಾಥ್.ಎಸ್.ಎಸ್, ಡಾ.ಮಾಲತೇಶ್. ಡಾ.ಶಂಭುಲಿಂಗಪ್ಪ.ಬಿ.ಇ, ಡಾ.ಹರೀಶ.ಎಮ್ರವರು ಪಾಲನೆ ಮತ್ತು ಪೋಷಣೆ, ವಸತಿ, ರೋಗಗಳ ನಿರ್ವಹಣೆ, ಲಸಿಕೆ ಹಾಗೂ ಆರ್ಥಿಕತೆ ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಪ್ರಾತ್ಯಕ್ಷಿತೆ ಮತ್ತು ಮಾಹಿತಿ ನೀಡಿದರು
”