ಶಿವಮೊಗ್ಗ: ವಿನ್ ಲೈಫ್ ನ ಮ್ಯಾನೇಜಿಂಗ್ ಟ್ರಸ್ಟಿ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಆದ ಡಾ.ಪೃಥ್ವಿ ಬಿಸಿ ಇಂದು ಪತ್ರಿಕಾಗೋಷ್ಠಿ ನಡೆಸಿ ವಿನ್ ಲೈಫ್ ಮೆಟ್ರೋ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗದಲ್ಲಿ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಗಾರ ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ ಮಧುಮೇಹ @360′ ಈ ವಿಷಯಗಳ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಏಪ್ರಿಲ್ 2ನೇ ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕುವೆಂಪು ರಂಗಮಂದಿರದಲ್ಲಿ ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು

ಈ ಸಮಾವೇಶದಲ್ಲಿ ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ ಕಾರ್ಯಗಾರ ಯೋಗ ವಸ್ತು ಪ್ರದರ್ಶನ ಕಿರು ನಾಟಕ ಪ್ರದರ್ಶನ ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ

ಪತ್ರಿಕಾಗೋಷ್ಠಿಯಲ್ಲಿ ವಿನ್ ಲೈಫ್ ಟ್ರಸ್ಟಿನ ನಿರ್ದೇಶಕರುಗಳಾದ ಡಾ. ಶಂಕರ್ ಡಾ. ವಿಜಯಕುಮಾರ್ ಶ್ರೀ ರೆಹಮತ್ ಹಾಗೂ ಶ್ರೀ ಬದ್ರಿನಾಥ್ ಉಪಸ್ಥಿತರಿದ್ದರು

error: Content is protected !!