ಜಿಲ್ಲೆಯಲ್ಲಿ ಕೃಷಿಯು ಮುಂಗಾರು ಮಳೆ ಆಧಾರಿತವಾಗಿದ್ದು, ಮಳೆಯು ಅನಿಶ್ಚಿತವಾಗಿರುವ ಕಾರಣ ಬೆಳೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಕೃತಿ ವಿಕೋಪಗಳಾದ ಅತಿವೃಷ್ಠಿ, ಅನುವೃಷ್ಠಿ, ಭೂಕುಸಿತ, ಆಲಿಕಲ್ಲು ಮಳೆ, ಅಕಾಲಿಕ ಮಳೆ ಇತ್ಯಾದಿಗಳಿಂದ ಸಂಬಂವಿಸಬಹುದಾದ ಬೆಳೆ ನಷ್ಟವನ್ನು ಬೆಳೆ ವಿಮೆಯಿಂದ ಭರಿಸಿಕೊಳ್ಳಲು ಸಾಧ್ಯ.
2019-20 ರ ಮುಂಗಾರು ಹಂಗಾಮಿನ ಬೆಳೆ ವಿಮೆಗಾಗಿ ನೋಂದಾಯಿಸಲು ಮುಸುಕಿನ ಜೋಳ (ನೀರಾವರಿ/ಮಳೆಆಶ್ರಿತ)-31-07-2019, ಭತ್ತ (ನೀರಾವರಿ/ಮಳೆಆಶ್ರಿತ)- 14-08-2019, ಜೋಳ (ಮಳೆ ಆಶ್ರಿತ) – 14-08-2019, ರಾಗಿ (ಮಳೆ ಆಶ್ರಿತ)- 14-08-2019 ಅಂತಿಮ ದಿನಾಂಕವಾಗಿರುತ್ತದೆ.
ಬೆಳೆ ವಿಮೆಗಾಗಿ ನೋಂದಾಯಿಸಲು ಅಂತಿಮ ದಿನಾಂಕದ ಒಳಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗಾಗಿ ನೋಂದಾಯಿಸಿ ಕೊಳ್ಳುವಂತೆ ಕೋರಿದೆ. ಬಿತ್ತನೆ/ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೇ ನೋಂದಾಯಿಸಲು ಸಹ ಅವಕಾಶವಿರುತ್ತದೆ. ಬೆಳೆ ಸಾಲ ಪಡೆಯುವ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದ್ದು, ಸಾಲ ನೀಡುವ ಸಂಸ್ಥೆಗಳು ನೋಂದಾಯಿಸಿಕೊಳ್ಳುವರು. ಬೆಳೆ ಸಾಲ ಪಡೆಯದ ರೈತರು ತಮಗೆ ಹತ್ತಿರವಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (C S C ಕೇಂದ್ರಗಳು) ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸಮೀಪವಿರುವ ಬ್ಯಾಂಕ್ ಅದಿಕಾರಿಗಳನ್ನು ಸಂಪರ್ಕಿಸಲು ಕೋರಿದೆ. ಅಲ್ಲದೆ ಸಂರಕ್ಷಣೆ ವೆಬ್ ಸೈಟ್ ನಲ್ಲಿಯೂ (http://samrkshane.karnataka.gov.in) ಸಹ ಮಾಹಿತಿ ಪಡೆಯಬಹುದು.

ದಿನಾಂಕ:- 06-05-2019. ಜಂಟಿ ಕೃಷಿ ನಿರ್ದೇಶಕರು,
ಶಿವಮೊಗ್ಗ.

error: Content is protected !!