News Next

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಐ.ಸಿ.ಎ.ಆರ್-.ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರು ರೈತರಿಗೆ ತಿಳಿಸುವುದೇನೆಂದರೆ, ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಒಂದು ಆಪ್ ಅನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು, ಮೊಬೈಲ್‍ಗೆ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನೀವೇ ದಾಖಲಿಸಬಹುದಾಗಿದೆ.

ಇದ್ದರ ಉದ್ದೇಶಗಳೆಂದರೆ,
• ಎನ್.ಡಿ.ಆರ್.ಎಫ್./ಎಸ್.ಡಿ.ಆರ್.ಎಫ್. ಅಡಿಯಲ್ಲಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು ಉಪಯೋಗ.
• ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಉಪಯೋಗ.
• ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು ಉಪಯೋಗ.
• ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ.
• ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಉಪಯೋಗ
• ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಟಾನಕ್ಕೆ ತರಲು ಉಪಯೋಗ ಹಾಗೂ
• ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗ

ಬೆಳೆಯ ಸಮೀಕ್ಷೆ ಮೊಬೈಲ್ ಆಪ್‍ಅನ್ನು
ಗೂಗಲ್ ಪ್ಲೇ-ಸ್ಟೋರ್‍ನಲ್ಲಿ “Farmers Crop Survey App 2020-21” ಎಂದು ಹುಡುಕಿ ಮೊಬೈಲ್ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ ಅಥವಾ
https://play.google.com/store/apps/details?id=com.csk.KariffTPKfarmer.cropsurvey

ಈ ಲಿಂಕ್‍ಅನ್ನು ಕ್ಲಿಕ್ ಮಾಡುವ ಮೂಲಕ ಕೂಡ ಡೌನ್‍ಲೋಡ್ ಮಾಡಿಕೊಂಡು ಬೆಳೆಗಳ ವಿವರಗಳನ್ನು ದಾಖಲಿಸುವುದು.
• 2020-21ನೇ ಸಾಲಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದೆ.
• ಬೆಳೆ ವಿವರ ದಾಖಲಿಸಲು “ರೈತರ ಬೆಳೆ ಸಮೀಕ್ಷೆ” ಮೊಬೈಲ್ ಆಪ್ ಅನ್ನು ಬಳಸುವುದು,
• ಆಪ್ ಬಳಕೆ ಕುರಿತು ಮಾಹಿತಿಗಾಗಿ ನಿಮ್ಮ ಗ್ರಾಮಗಳಲ್ಲಿ ನೇಮಿಸಿರುವ ಖಾಸಗಿ ನಿವಾಸಿಗಳನ್ನು ಅಥವಾ ಕೃಷಿ, ಕಂದಾಯ ಅಥವಾ ತೋಟಗಾರಿಕೆ ಇಲಾಖೆಯನ್ನು ಅಥವಾ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗಕ್ಕೆ ಸಂಪರ್ಕಿಸಿ.

error: Content is protected !!