ಸ್ಮಾರ್ಟ್‌ ಸಿಟಿ ಶಿವಮೊಗ್ಗ ನಗರದ ತುಂಗಾ ನದಿ ದಡದಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿದಂಡೆ ಯೋಜನೆ ಪೂರ್ಣಗೊಂಡಿದ್ದು, ಸ್ವಾತಂತ್ರ್ಯ ದಿನದಂದು ಲೋಕಾರ್ಪಣೆಗೊಳ್ಳಲಿದೆ. ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಸಿಗಲಿದೆ ಎಂದು ಸ್ಮಾರ್ಟ್‌ ಸಿಟಿ ಎಂಡಿ ಚಿದಾನಂದ ವಟಾರೆ ಹೇಳಿದರು.
ಶಿವಮೊಗ್ಗ ನಗರದ ಬೆಕ್ಕಿನ ಕಲ್ಮಠದಿಂದ ಬೈಪಾಸ್‌ ರಸ್ತೆವರೆಗಿನ ತುಂಗಾ ನದಿ ಪಕ್ಕದ ಜಾಗದಲ್ಲಿ (2.7 ಕಿಮೀ ) ಗುಜರಾತ್‌ನ ಸಾಬರಮತಿ ರಿವರ್‌ ಫ್ರಂಟ್‌ ಯೋಜನೆ ಮಾದರಿಯಾಗಿಸಿಕೊಂಡು ಶಿವಮೊಗ್ಗದಲ್ಲಿಯೂ ತುಂಗಾ ರಿವರ್‌ ಫ್ರಂಟ್‌ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಪ್ರವಾಸಿಗರ ಆಕರ್ಷಣೆ ದೃಷ್ಠಿಯಿಂದಲೂ ಮಹತ್ತರ ಯೋಜನೆ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆಯು ಪಾದಾಚಾರಿ ಮಾರ್ಗ, ಸೈಕಲ್‌ ಟ್ರ್ಯಾಕ್‌, ಹೂದೋಟ, ಮಕ್ಕಳ ಮನರಂಜನೆಗೆ ಆಟಿಕೆ, ಜಿಮ್‌ ಉಪಕರಣ, ಅಲಂಕಾರಿಕಾ ಗೋಡೆ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ವೀಕ್ಷಣಾ ಗೋಪುರ, ಕಾರಂಜಿ, ಮಾಹಿತಿ ಕೇಂದ್ರ ಸಹ ಇರಲಿದೆ. 70ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಬೋಟಿಂಗ್‌ ವ್ಯವಸ್ಥೆ ಸಹ ಇರಲಿದೆ ಎಂದರು.

error: Content is protected !!