ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ ಪೇಟೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಘನದ್ರವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್‌ ನ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಎಂ.ಎಲ್.‌ ವೈಶಾಲಿ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ರಿಪ್ಪನಪೇಟೆ ಗ್ರಾಮ ಪಂಚಾಯಿತಿಯಲ್ಲಿ ನಗರದಲ್ಲಿ ಬಂದಂತಹ ಘನದ್ರವ ತ್ಯಾಜ್ಯವನ್ನು ಕ್ರಮಬದ್ದವಾಗಿ ಸಂಸ್ಕರಣೆ ಮಾಡುವ ಘಟಕ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಾಡಿದೆ.

ಭಾರತ ಸಕಾ೯ರ ಸ್ವಚ್ಚಭಾರತ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿಮಿ೯ಸಲು ಅನುದಾನದನ್ನು ನೀಡುತ್ತಿದೆ.ದೇಶ ಸಂಪೂಣ೯ವಾಗಿ ಕಸ ಮುಕ್ತವಾಗಬೇಕು. ಮಹಾತ್ಮ ಗಾಂಧೀಜಿಯವರ ಕಲ್ಪನೆಯಂತೆ ಭಾರತ ಸಕಾ೯ರ ಈ ಯೋಜನೆಗೆ ಹೆಚ್ಚಿನ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.

ಗ್ರಾಮಾಬಿವೃದ್ದಿ ಮತ್ತು ಪಂಚಾಯತ್‌ ಇಲಾಖೆ ಗ್ರಾಮಗಳಲ್ಲಿ ಸಿಗುವ ತ್ತಾಜ್ಯವನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗವನ್ನು ಗುರುತಿಸಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿಮಿ೯ಸುವ ಜವಾಬ್ದಾರಿಯನ್ನು ಸ್ತಳೀಯ ಪಂಚಾಯಿತಿಗಳಿಗೆ ನೀಡಿದೆ. ಅದರಂತೆ ಜಿಲ್ಲೆಯಲ್ಲಿಯೇ ಪ್ರಥಮ ಘನದ್ರವ ತ್ಯಾಜ್ಯ ವಿಲೇವಾರಿ ಘಟಕ ರಿಪ್ಪನ್‌ ಪೇಟೆ ಗ್ರಾಮ ಪಂಚಾಯಿತಿ ನಿವ೯ಹಣೆ ಮಾಡುತ್ತಿದೆ.

error: Content is protected !!