ಅಪಘಾತ ಸಂತ್ರಸ್ತ ಕುಟುಂಬಕ್ಕೆ 19 ರೂ. ಲಕ್ಷ ಚೆಕ್ ವಿತರಣೆ
ಶಿವಮೊಗ್ಗ, ಆಗಸ್ಟ್ 13

ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದ ಮೂಲಕ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಅವರು ತಿಳಿಸಿದರು.
ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ 3ನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 52 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ವಕೀಲರು ಮತ್ತು ಕಕ್ಷಿದಾರರ ಸಹಕಾರದಿಂದ 10 ಸಾವಿರ ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ ಹಾಗೂ ಸುಮಾರು 5 ಸಾವಿರ ಪ್ರಕರಣಗಳಿಗೆ ತೀರ್ಪು ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.
ಪರಿಹಾರ ವಿತರಣೆ: ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಸಂತ್ರಸ್ತರ ರೇಣು.ಎಸ್ ಎಂಬವರ ಕುಟುಂಬಕ್ಕೆ 19ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು. ಪೇಂಟಿಂಗ್ ಕೆಲಸ ಮಾಡುತ್ತಿದ್ದ ರೇಣು.ಎಸ್ ಅವರು ಮೋಟಾರು ಬೈಕ್ ನಲ್ಲಿ ಹೊಳೆಹೊನ್ನೂರು ಕಡೆಗೆ ಹೋಗುವಾಗ ಶಿವಮೊಗ್ಗ ತಾಲ್ಲೂಕಿನ ಹೊಳೆ ಬೇವನಹಳ್ಳಿ ಗ್ರಾಮದ ಬಳಿ 28 ಜನವರಿ 2022 ರಂದು ಬೈಕ್ ಅಪಘಾತಾದಲ್ಲಿ ಸಾವನ್ನಪ್ಪಿದ್ದರು.

ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬೈಕ್ ಅಪಘಾತ ದಲ್ಲಿ ಮೃತಪಟ್ಟ ರೇಣು.ಎಸ್ ಕುಟುಂಬಕ್ಕೆ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕೊ. ಲಿಮಿಟೆಡ್ ಇನ್ಸೂರೆನ್ಸ್ ಕಂಪನಿ ಮೂಲಕ ನ್ಯಾಯಾಧೀಶರು 19 ಲಕ್ಷದ ಚೆಕ್ನ್ನು ರೇಣು.ಎಸ್ ಅವರ ಪತ್ನಿಯಾದ ಕೋಕಿಲಾ ಅವರಿಗೆ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯವಾದಿಗಳಾದ ರಾಜಣ್ಣ ಸಂಕಣ್ಣನವರ್ ಉಪಸ್ಥಿತರಿದ್ದರು.

error: Content is protected !!