ಜಿಲ್ಲಾ ಪಂಚಾಯತ್ , ಜಿಲ್ಲಾಡಳಿತ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ಸಹಯೋಗದಲ್ಲಿ ಇದೇ ತಿಂಗಳ ೧೦ನೇ ತಾರೀಖಿನಂದು ರಾಷ್ಟ್ರೀಯ ಜಂತು ಹುಳ ನಿವಾರಣ ದಿನವನ್ನು ಆಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ೧ ರಿಂದ ೧೯ ವರುಷದೊಳಗಿನ ಮಕ್ಕಳಿಗೆ ಜಂತು ಹುಳು ಮಾತ್ರಯನ್ನು ಕೊಡಲಾಗುತ್ತಿದೆ.ಇದರ ಉಪಯೋಗವನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.
ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿದ ಜಿಲ್ಲಾ ಅರೋಗ್ಯ ಅಧಿಕಾರಿ ಡಾ || ರಾಜೇಶ ಸುರಗೀಹಳ್ಳಿ ೧ ರಿಂದ ೧೯ ವರುಷದೊಳಗಿನ ಎಲ್ಲಾ ಮಕ್ಕಳು ಇದೇ ತಿಂಗಳ ೧೦ನೇ ತಾರೀಖಿನಂದು ತಪ್ಪದೇ ಜಂತುಹುಳು ಮಾತ್ರೆಯನ್ನು ತೆಗೆದುಕೊಳ್ಳಲೇಬೇಕು. ಈ ಜಂತುಹುಳುವಿನ ಭಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ,ನಿಶ್ಯಕ್ತಿಯಿಂದ ಬಳಲುವಿಕೆ ಕಂಡುಬರುತ್ತದೆ.ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಜಂತುಹುಳುವಿನ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕೊಡಲಾಗುವುದು ಮಾತ್ರೆಗಳನ್ನು ಪಡೆದುಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದು.ಸ್ವಚ್ಚತೆಯ ಬಗ್ಗೆ ಹಾಗು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಕೊಟ್ಟ ಮಾತ್ರೆಯನ್ನು ಯಾರೂ ಕೂಡ ಮನೆಗೆ ತೆಗೆದುಕೊಂಡು ಹೋಗದೇ ಅಲ್ಲೇ ತೆಗೆದುಕೊಳ್ಳಬೇಕು ಎಂದು ಹೇಳಿದರು.