ಶಿವಮೊಗ್ಗ, : ತೋಟಗಾರಿಕೆ ಇಲಾಖೆ ವತಿಯಿಂದ 2021-22 ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಿವಿಧ ಕಾರ್ಯಕ್ರಮದಡಿ ಸಹಾಯಧನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಪೆಷಲ್ ಇಂಟರ್ವೆನ್ಶನ್ಸ್ ಫಾರ್ ಕ್ವಾಲಿಟಿ ಪ್ರೊಡಕ್ಷನ್ ಇನ್ ಹಾರ್ಟಿಕಲ್ಚರ್ ಕ್ರಾಪ್ಸ್ ಕಾರ್ಯಕ್ರಮದಡಿ ನೀರಿನಲ್ಲಿ ಕರಗಿಸಿ ಉಪಯೋಗಿಸುವಂತಹ ಗೊಬ್ಬರಗಳು, ವಿವಿಧ ಬಗೆಯ ಸೂಕ್ಷ್ಮ ಪೋಷಕಾಂಶಗಳು, ಹೂವು ಮತ್ತು ಹಣ್ಣುಗಳ ಕವರ್, ವಾಕ್ ಇನ್ ಟನಲ್ ರೀತಿಯ ಪಾಲಿಮನೆಗಳಿಗೆ ಹಾಗೂ ಕ್ಯಾನೊಪಿ ಮ್ಯಾನೇಜ್ಮೆಂಟ್ ಘಟಕಗಳಿಗೆ ಸಹಾಯಧನ ನೀಡಲಾಗುವುದು.
ನೀರು ಸಂಗ್ರಹಣಾ ಘಟಕಗಳ(ಕೃಷಿ ಹೊಂಡ) ನಿರ್ಮಾಣ ಕಾರ್ಯಕ್ರಮದಡಿ ನೆಲಮಟ್ಟದಿಂದ ಕೆಳಗಿನ 4500 ಚ.ಮೀ/6500 ಚ.ಮೀ/9000 ಚ.ಮೀ ಸಾಮಥ್ರ್ಯದ ಘಟಕಗಳು ಹಾಗೂ ನೆಲಮಟ್ಟದಿಂದ ಮೇಲೆ 1 ಲಕ್ಷ ಲೀಟರ್/2 ಲಕ್ಷ ಲೀಟರ್/5 ಲಕ್ಷ ಲೀಟರ್ ಸಾಮಥ್ರ್ಯದ ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
ಪ್ರಸಕ್ತ ಇರುವ ಹಳೆಯ ಹೈಟೆಕ್ ಸಂರಕ್ಷಿತ ಬೇಸಾಯ ಘಟಕಗಳ ಪುನಶ್ಚೇತನಗೊಳಿಸುವ ಉದ್ದೇಶದಿಂದ ಹಸಿರು ಮನೆಗಳು ಶಿಥಿಲಗೊಂಡು ಹಾಳಾಗಿರುವ ಘಟಕಗಳ ಪಾಲಿಥೀನ್ ಶೀಟ್ ಬದಲಾವಣೆಗೆ ಹಾಗೂ ಪಾಲಿಮನೆಯಲ್ಲಿ ಗಿಡಗಳ ಬದಲಾವಣೆಗೆ ಸಹಾಯಧನ ನೀಡಲಾಗುವುದು.
ಇನ್ಸೆಂಟಿವ್ ಫಾರ್ ಪೋಸ್ಟ್ ಹಾರ್ವೆಸ್ಟ್ ಮ್ಯಾನೇಜ್ಮೆಂಟ್ ಆಫ್ ಹಾರ್ಟಿಕಲ್ಚರ್ ಕಾರ್ಯಕ್ರಮದಡಿ ಕೋಯ್ಲೋತ್ತರ ನಿರ್ವಹಣೆಯ ಫಾರಂ ಗೇಟ್, ವಿಂಗಡಣೆ ಮತ್ತು ಶೇಕರಣಾ ಘಟಕ ನಿರ್ಮಾಣಕ್ಕೆ ಹಾಗೂ ಕೋಯ್ಲೋತ್ತರ ನಿರ್ವಹಣೆಗೆ ಅವಶ್ಯವಿರುವ ಪುನ್ನೇಟ್ ಬಾಕ್ಸ್, ಪ್ಲಾಸ್ಟಿಕ್ ಕ್ರೇಟ್ಸ್, ಇತರೆ ಪ್ಯಾಕಿಂಗ್ ಸಾಮಗ್ರಿಗಳ ಖರೀದಿಗೆ ಸಹಾಯಧನ ನೀಡಲಾಗುವುದು.
ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಿಗೆ ಇಲಾಖೆಯಿಂದ ನೀಡಲಾಗುವ ಮಾರ್ಗಸೂಚಿಯನುಸಾರ ಘಟಕ ವೆಚ್ಚದ ಶೇ.50 ರಂತೆ ಸಹಾಯಧನ ನೀಡಲು ಅವಕಾಶವಿದ್ದು, ಆಸಕ್ತ ಮತ್ತು ಅರ್ಹ ರೈತರು ತಮ್ಮ ತಾಲ್ಲೂಕುಗಳ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಘಟಕವಾರು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.