ರಕ್ತದಾನವು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಿಲ್ಲ. ಒಬ್ಬ ವ್ಯಕ್ತಿಯು ರಕ್ತದಾನ ಮಾಡುವುದರಿಂದ ಕನಿಷ್ಠ ಮೂವರು ವ್ಯಕ್ತಿಗಳ ಪ್ರಾಣವನ್ನು ಉಳಿಸಬಹುದು. ರಕ್ತವನ್ನು ದಾನಿಗಳಿಂದ ಮಾತ್ರ ಪಡೆಯಲು ಸಾಧ್ಯ ರಕ್ತದಾನ ಮಾಡಿದ ವ್ಯಕ್ತಿಯಲ್ಲಿ ೩ದಿನಗಳ ಒಳಗೆ ಹೊಸ ರಕ್ತವು ಉತ್ಪತ್ತಿಯಾಗಲು ಪ್ರಾರಂಭವಾಗುತ್ತದೆ. ರಕ್ತದಾನ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ದೇಹದಲ್ಲಿ ಕೊಲೆಸ್ಟಾçಲ್ ಕಡಿಮೆಯಾಗುತ್ತದೆ. ರಕ್ತದಾನ ಮಾಡುವುದರಿಂದ ಹೃದಯ ಸಂಬ0ಧಿ ಕಾಯಿಲೆಗಳನ್ನು ಕೂಡ ತಡೆಗಟ್ಟಬಹುದು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಶೇ೮೦ ರಷ್ಟು ಹೃದಯ ಸಂಬAಧಿ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳು, ಹಿಮೋಫೋಲಿಯಾ, ಗರ್ಭಿಣಿ ಸ್ತಿçÃಯರು ಮುಂತಾದ ಸಂದರ್ಭಗಳಲ್ಲಿ ರಕ್ತದ ಅತಿ ಹೆಚ್ಚು ಅವಶ್ಯಕತೆ ಇದೆ. ಆದರೆ ಬೇಡಿಕೆಯಷ್ಟು ರಕ್ತ ಲಭ್ಯವಾಗುತ್ತಿಲ್ಲ. ಯುವ ಜನಾಂಗದವರು ರಕ್ತದಾನ ಮಾಡುವುದರ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರು ಹಾಗೂ ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಧರಣೇಂದ್ರ ದಿನಕರ ಅವರು ನಗರದ ಪಿಇಎಸ್ ಐಎಎಂಎಸ್ ಕಾಲೇಜಿನ ವತಿಯಿಂದ ಕೊಮ್ಮನಾಳು ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೆಡ್‌ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಮತ್ತು ರಕ್ತ ತಪಾಸಣಾ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ನುಡಿದರು.
ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಎಸ್ ದಿನಕರ ಅವರು ಶಿಬಿರಾರ್ಥಿಗಳ ಶಿಸ್ತು, ಸಂಯಮ ಮತ್ತು ಸೇವಾ ಮನೋಭಾವಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ರಕ್ತದಾನ ಶಿಬಿರದ ಮಹತ್ವವನ್ನು ತಿಳಿಸಿದರು.
ರೋಟರಿ ಶಿವಮೋಗ್ಗ ಪೂರ್ವದ ಅಧ್ಯಕ್ಷರಾದ ಸುಮತಿ ಕುಮಾರಸ್ವಾಮಿಯವರು ಮಾತನಾಡುತ್ತಾ ರಕ್ತದಾನದ ಮಹತ್ವವನ್ನು ಶಿಬಿರಾರ್ಥಿಗಳು ತಿಳಿಯುವ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು. ಇದು ಜೀವಗಳನ್ನು ಉಳಿಸುವ ಪವಿತ್ರ ಕಾರ್ಯವಾಗಿದೆ. ೧೮ ರಿಂದ ೫೦ ವರ್ಷದವರೆಗಿನ ಆರೋಗ್ಯ ಪೂರ್ಣ ವ್ಯಕ್ತಿಗಳು ರಕ್ತದಾನವನ್ನು ಮಾಡಬಹುದು ಎಂದು ನುಡಿದರು. ರೋಟರಿ ಮಾಜಿ ಸಂಯೊಜಕ ಗವರ್ನರ್ ಆದ ವಿಜಯ ಕುಮಾರ ಅವರು ರಕ್ತದಾನಿಗಳ ಕೆಲಸವನ್ನು ಶ್ಲಾಘಿಸಿದರು. ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪುಕಲ್ಪನೆಗಳಿವೆ. ಮಾಹಿತಿಯ ಕೊರತೆ ಇದೆ. ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ರಕ್ತದಾನಿಗೆ ಹಲವಾರು ಪ್ರಯೋಜನೆಗಳಿದ್ದು ಎಲ್ಲರೂ ರಕ್ತ ದಾನ ಮಾಡಲು ಮುಂದಾಗಬೇಕು. ಇದು ಅತ್ಯಂತ ಶ್ರೇಷ್ಟ ದಾನವಾಗಿದೆ ಎಂದು ನುಡಿದರು.
ಶಿಬಿರದಲ್ಲಿ ರಕ್ತ ದಾನ ಮತ್ತು ರಕ್ತ ತಪಾಸಣೆ ನಡೆಯಿತು. ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ರಕ್ತ ದಾನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿಗಳಾದ ಕುಮಾರಸ್ವಾಮಿ, ರಾ.ಸೇ.ಯೋ ಯ ಶಿಬಿರಾಧಿಕಾರಿಗಳಾದ ಪ್ರದೀಪ್ ಎಸ್.ಎಚ್., ಪ್ರಾಂಶುಪಾಲರಾದ ಡಾ.ಅರುಣಾ ಎ., ಎಂಬಿಎ ವಿಭಾಗದ ಮುಖ್ಯಯಸ್ಥರಾದ ಡಾ.ಪ್ರಸನ್ನ ಕುಮಾರ್ ಹಾಗೂ ಕನ್ನಡ ಸಹಾಯಕ ಪ್ರದ್ಯಾಪಕರಾದ ಡಾ.ಎನ್ ಪ್ರವೀಣ್ ಚಂದ್ರ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದರು. ಅಖಿಲಾ ಎಸ್. ನಿರೂಪಿಸಿದರು. ಕವನ ಟಿ.ಎಸ್ ಇವರು ಸ್ವಾಗತಿಸಿ, ನಿಧಿ ಬಿ.ಡಿ ಇವರು ವಂದಿಸಿದರು.