ರಕ್ತದಾನ ಮಾಡುವುದರಿಂದ ದೇಹ ಮನಸ್ಸು ಸದೃಡವಾಗುವುದರ ಜೊತೆಗೆ ಆರೋಗ್ಯ ಹಾಗೂ ಆಯುಷ್ ವೃದ್ದಿಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಕೆ.ಬಿ.ಶಿವಕುಮಾರ್ ನುಡಿದ್ದರು. ಅವರು ಇಂದು ಬೆಳಿಗೆ ಜವಹರ್ ಲಾಲ್ ನೆಹರು ರಾಷ್ಟಿಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ (ರಿ) ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಶಿವಮೊಗ್ಗ. ರಾಷ್ಟೀಯ ಶಿಕ್ಷಣ ಸಮಿತಿ (ರಿ) ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ಹಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರ-2020 ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಎಲ್ಲರು ಮಾಡಲಾಗುವುದಿಲ್ಲ ವಯಸ್ಸು ಆರೋಗ್ಯ ಮತ್ತು ದಾನ ಮಾಡುವ ಮನಸ್ಸು ಇರಬೇಕು ರಕ್ತದಾನಕ್ಕಿಂತ ಬೇರೆ ದಾನ ಇನ್ನೊಂದಿಲ್ಲ. ಯುಕರಲಿ ದೇಶ ಸೇವೆ ಹಾಗೂ ಸಮುದಾಯಗಳಲ್ಲಿ ಸೇವೆ ಸಲ್ಲಿಸುವ ಆಸಕ್ತಿಯನ್ನುರೂಢಿಸಿಕೊಳ್ಳಬೇಕು , ಯಾವುದೆ ಸರ್ಕರದ ಸಹಬಾಗಿತ್ವ ಇಲ್ಲದೆ ಇಂತಹ ಪವಿತ್ರ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಒಳ್ಳೆಯಾದು ಎಂದು ನುಡಿದರು.

ಇದೇ ಸಂದರ್ಬದಲ್ಲಿ ರಾಷ್ಟಿಯ ಶಿಕ್ಷಣ ಸಮಿತಿಯ ಉಪಾದ್ಯಕ್ಷರಾದ ಟಿ. ಆರ್. ಅಶ್ವತ್‍ನಾರಾಯಣ್ ಶೆಟ್ಟಿ ಮಾತನಾಡು ರಕ್ತಕ್ಕೆ ಪರಿಯಯವಾದ ವಸ್ತುವಿಲ್ಲ. ರಕ್ತವನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತವು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. ಹಾಗಾಗಿ ಯುವಕರು ಯುವತಿಯರು ರಕ್ತದಾನ ಮಾಡಿ ಪವಿತ್ರ ದಾನಿಗಳಗಬೇಕು ಎಂದು ಕರೆನೀಡಿದರು.

ಇದೇ ಸಂದರ್ಬದಲ್ಲಿ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಯೊಜಿಸಿದ ಯೂತ್ ಹಾಸ್ಟೆಲಿನ ಅದ್ಯಕ್ಷರಾದ ಎಸ್.ಎಸ್. ವಾಗೀಶ್ ಅವರು ಮಾತಾನಡುತ್ತಾ ಇಂದು ಜಿಲ್ಲೆಯಲ್ಲಿ ಪ್ರತಿನಿತ್ಯ ಸಾಆಕಸ್ಟು ರಕ್ತದ ಕೊರತೆಯಿಂದ ಜನ ಬಳಲುತ್ತಿದ್ದಾರೆ.. ಮಾಡಿದ ರಕ್ತದಾನ ಮೂರು ಜನರ ಪ್ರಾಣವನ್ನು ಉಳಿಸುತ್ತದೆ, ಅದರಿಂದ ತಾವು ರಕ್ತದಾನ ಮಾಡಿ ಇತರರಿಗೆ ದಾನ ಮಾಡಲು ಪ್ರೊತ್ಸಾಹಿಸಿ ಎಂದು ನುಡಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಸ್ವಯಂ ಪ್ರೆರಿತ ರಕ್ತದಾನಿಗಳ ಸೇವ ಸಂಸ್ಥೆಯ ಅದ್ಯಕ್ಷರಾದ ದರಣೇಂದ್ರ ದಿನಕರ್ ವಯಿಸಿ ರಕ್ತದಾನದ ಮಹಾತ್ವವನ್ನು ತಿಳಿಸಿದರು. ಸಮಾರಂಭದಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ರಕ್ತನಿಧಿ, ರೋಟರಿ ರಕ್ತನಿಧಿ, ರೆಡ್‍ಕ್ರಾಸ್ ಸಂಜಿವಿನಿ ರಕ್ತನಿಧಿ ಭಾಗವಹಿಸಿದವು ವೇದಿಕೆಯಲ್ಲಿ ಯೂತ್ ಹಾಸ್ಟೆಲ್ ರಾಜ್ಯಘಟಕದ ಉಪಧ್ಯಕ್ಷ ಜಿ.ವಿಜಯಕುಮಾರ್, ಪ್ರಾಂಶುಪಾಲ ಹೆಚ್.ಆರ್.ಮಹದೇವಸ್ವಾಮಿ, ಕಾರ್ಯದರ್ಶಿ ಸುರೇಶ್‍ಕುಮಾರ್, ರಾಷ್ಟ್ರೀಯ ಸೇವಾಯೋಜನೆ ಅಧಿಕಾರಿ ಆನಂದ್‍ರಾವ್, ಅರುಣ್‍ಕುಮಾರ್, ದಿಲೀಪ್‍ನಾಡಿಗ್, ಬಸವರಾಜ್, ಧನಲಕ್ಷ್ಮೀ ಗಿರೀಶ್, ಲೋಕೇಶ್ವರಿ ಚೋಳಕೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!