News Next

ಶಿವಮೊಗ್ಗ, ಜನವರಿ 19 : ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಜನವರಿ-20 ರ ಬುಧವಾರದಿಂದ 15 ದಿನಗಳ ಕಾಲ ಸಿಮೆಂಟ್ ಶಿಲ್ಪ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದ ಉದ್ಘಾಟನೆಯನ್ನು ಅಂದು ಬೆಳಗ್ಗೆ 11.30ಕ್ಕೆ ಶಿವಮೊಗ್ಗದ ಹಿರಿಯ ಶಿಲ್ಪ ಕಲಾವಿದ ಜ್ಞಾನೇಶ್ವರ್ ನೆರವೇರಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ವೀರಣ್ಣಾ ಮ. ಅರ್ಕಸಾಲಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಚಿತ್ರ ಕಲಾವಿದ ಸಿ.ಎಸ್. ಚಿಕ್ಕಮಠ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಆಗಮಿಸಲಿದ್ದಾರೆ.
ಕರ್ನಾಟಕ ರಾಜ್ಯದ ಬೇರೆ ಬೇರೆ ಭಾಗಗಳಿಂದ ಸುಮಾರು 30 ಹಿರಿಯ ಮತ್ತು ಸಹಾಯಕ ಶಿಲ್ಪಿಗಳು ಭಾಗವಹಿಸಲಿದ್ದು, ಕನ್ನಡ ರಂಗಭೂಮಿಯ ಹೆಸರಾಂತ ನಾಟಕಗಳ ದೃಶ್ಯ, ಜಾನಪದ ಪದ್ಧತಿಗಳು, ಯಕ್ಷಗಾನ, ಭೂತದ ಕೋಲ ಮತ್ತು ನೃತ್ಯ ಪ್ರಕಾರಗಳ ವಿವಿಧ ಭಂಗಿಗಳ ಸಿಮೆಂಟ್ ಶಿಲ್ಪಗಳನ್ನು ನಿರ್ಮಿಸಲಿದ್ದಾರೆ.
ಶಿಬಿರಕ್ಕೆ ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಸಹಯೋಗ ನೀಡುತ್ತಿದ್ದು, ಸಾರ್ವಜನಿಕರು ವೀಕ್ಷಿಸಲು ಅವಕಾಶವಿದೆಯೆಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದ್ದಾರೆ.

error: Content is protected !!