ಶಿವಮೊಗ್ಗ ಜೂನ್ 14: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಯೋಗ ತರಬೇತಿಯನ್ನು ಸಂಸ್ಥೆಯ ನಿರ್ದೇಶಕ ಡಾ.ಓ.ಎಸ್.ಸಿದ್ದಪ್ಪ ಇಂದು ಉದ್ಘಾಟಿಸಿದರು.
2021-22 ನೇ ಸಾಲಿನಿಂದ ಭಾರತೀಯ ವೈದ್ಯಕೀಯ ಪರಿಷತ್ ವೈದ್ಯಕೀಯ ಶಿಕ್ಷಣದಲ್ಲಿ ಯೋಗವನ್ನು ಪ್ರತಿದಿನ ಒಂದು ಗಂಟೆಯಂತೆ ಹತ್ತು ದಿನಗಳ ಕಾಲ ತರಬೇತಿಯನ್ನು ಕಡ್ಡಾಯಗೊಳಿಸಿರುವನ್ವಯ ಇಂದು ಸಿಮ್ಸ್ ನಲ್ಲಿ ತರಬೇತಿ ಆಯೋಜಿಸಲಾಗಿತ್ತು.
ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಂಜುನಾಥ್, ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಹಾಜರಿದ್ದರು.
(ಫೋಟೊ ಇದೆ)

error: Content is protected !!