ಶಿವಮೊಗ್ಗ ಮೇ 18 : ಮೇ 19 ರಂದು ಪಾಲಿಕೆ ವ್ಯಾಪ್ತಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೇರಪಾವತಿ ಪೌರಕಾರ್ಮಿಕ ನೌಕರರು, ಹೊರಗುತ್ತಿಗೆ ವಾಹನ ಚಾಲಕರು, ಲೋಡರ್ಸ್, ಒಳಚರಂಡಿ ವಿಭಾಗದ ಕಾರ್ಮಿಕರು, ವಾಹನ ಚಾಲಕರ ಹೆಲ್ಪರ್ಸ್ ಮತ್ತು ಆಪರೇಟರ್ಸ್ ಕಾರ್ಮಿಕರು ಖಾಯಂ ಮಾಡಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕಾಗಿ ಒಂದು ದಿನ ಬಿಡುವು ಮಾಡಿಕೊಡುವಂತೆ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಶಿವಮೊಗ್ಗ ಪಾಲಿಕೆ ನೇರ ಪಾವತಿ ಪೌರಕಾರ್ಮಿಕರ ಸಂಘಗಳ ಮೂಲಕ ಮನವಿ ಮಾಡಿಕೊಂಡಿರುತ್ತಾರೆ.