ಶಿವಮೊಗ್ಗ, ಆಗಸ್ಟ್ 11 : ಯುವಜನಾಂಗಕ್ಕೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಹಾಗೂ ಪ್ರವಾಸೋದ್ಯಮವನ್ನು ಬೆಂಬಲಿಸುವ ದೃಷ್ಟಿಯಿಂದ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮವನ್ನು ಅಭಿವೃದ್ಧಿಪಡಿಸಲು ಅಗತ್ಯ ಆರ್ಥಿಕ ನೆರವನ್ನು ನೀಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸಿದರು.
ಅವರು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಇರಬಹುದಾದ ಅವಕಾಶಗಳು, ಶಿವಮೊಗ್ಗ-ಬೈಂದೂರು ನಡುವಿನ ಅರಣ್ಯ ಪ್ರದೇಶದಲ್ಲಿ ತುರ್ತಾಗಿ ಆಗಬೇಕಾದ ಆಯ್ದ ಕಾಮಗಾರಿಗಳು ಹಾಗೂ ಅಭಿವೃಧ್ಧಿಪಡಿಸಬೇಕಾದ ಉದ್ಯಾನವನಗಳು ಹಾಗೂ ಅರಣ್ಯ ಪ್ರದೇಶಗಳ ರಕ್ಷಣೆ ಕುರಿತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಕೇಂದ್ರ ಮೃಗಾಲಯ ಪ್ರಾಧಿಕಾರವು ಹುಲಿ-ಸಿಂಹಧಾಮ ಸಫಾರಿಯ ಮಾಸ್ಟರ್ ಪ್ಲಾನ್‍ನ್ನು ಅನುಮೋದಿಸಿದೆ. ಈ ಕ್ರಿಯಾಯೋಜನೆಯ ಅನುಷ್ಠಾನಕ್ಕಾಗಿ ಅಗತ್ಯವಾಗಿರುವ ಅನುದಾನದಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ಶೇ.40ರಷ್ಟು ಅಂದರೆ 500.00ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ. ಉಳಿದಂತೆ ಕೇಂದ್ರ ಮೃಗಾಲಯ ಪ್ರಾಧಿಕಾರವು ಕಳೆದ ಅಕ್ಟೋಬರ್‍ರಿಂದ ಬಾಕಿ ಉಳಿಸಿಕೊಂಡಿರುವ ಅನುಪಾತದ 750.00ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಲ್ಲಿ ಮಾಡಿಕೊಳ್ಳಲಾಗಿದ್ದು, ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಪ್ರಸ್ತುತ ತ್ಯಾವರೆಕೊಪ್ಪ ಮೃಗಾಲಯಕ್ಕೆ ಸುಮಾರು 2.77ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 266.00ಲಕ್ಷ ರೂ.ಗಳ ಆದಾಯ ಸಂಗ್ರಹವಾಗಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ ಎಂದವರು ತಿಳಿಸಿದ್ದಾರೆ.

ಬೈಂದೂರು ಮತ್ತು ಮೂಕಾಂಬಿಕಾ ಅಭಯಾರಣ್ಯದಲ್ಲಿ ಪ್ರಾಣಿ ರಕ್ಷಣಾ ಕೇಂದ್ರ ಸ್ಥಾಪಿಸುವಂತೆ ಮನವಿ : ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ಮತ್ತು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಕ್ಕೆ ಮೂಕಾಂಬಿಕಾ ದೇವಿಯ ಹೆಸರನ್ನಿಡಲಾಗಿದೆ. 370.37 ಚದರ ಕಿಮೀ ವಿಸ್ತೀರ್ಣದ ವಿಶಾಲ ಭೂಪ್ರದೇಶ ಹೊಂದಿರುವ ಈ ಅಭಯಾರಣ್ಯವು, ಪಶ್ಚಿಮ ಕರಾವಳಿಯ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಮತ್ತು ಪಶ್ಚಿಮ ಕರಾವಳಿಯ ಅರೆನಿತ್ಯಹರಿದ್ವರ್ಣದ ಕಾಡುಗಳನ್ನು ಒಳಗೊಂಡಿದೆ ಎಂದವರು ತಿಳಿಸಿದ್ದಾರೆ.
ಈಅಭಯಾರಣ್ಯವು ಚಿರತೆ, ಕಾಡುನಾಯಿ, ನರಿ, ಕರಡಿ, ಸಾರಂಗ, ಜಿಂಕೆ ಮತ್ತು ಇತರ ಅನೇಕ ಪ್ರಾಣಿಗಳಿವೆ. ವಿಶೇಷವಾಗಿ ಇಲ್ಲಿ ಪ್ರಮುಖವಾಗಿ ಕಾಡಿನ ಮೈನಾ, ಬಿಳಿ ಕೆನ್ನೆಯ ಬುಲ್‍ಬುಲ್, ಕೆಂಪು ವೆಂಟೆಡ್ ಬಲ್‍ಬುಲ್, ಹಾರ್ನ್ ಬಿಲ್ಸ್ ಮತ್ತು ಇತರೆ ಪ್ರಮುಖ ಪಕ್ಷಿಗಳು ಆಶ್ರಯ ಪಡೆದಿವೆ. ಮಾನವ-ಪ್ರಾಣಿಗಳ ಸಂಘರ್ಷದಿಂದಾಗಿಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದವರು ತಿಳಿಸಿದ್ದಾರೆ.
ವನ್ಯಜೀವಿಗಳ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಸಾರ್ವಜನಿಕರ ಬೆಂಬಲವನ್ನು ಸೃಷ್ಟಿಸಲು ಹಾಗೂ ಮನುಷ್ಯ ಮತ್ತು ವನ್ಯಜೀವಿಗಳಿಗೆ ಸವಾಲಾಗಿರುವ ಈ ಸಮಸ್ಯೆಯನ್ನು ಪರಿಹರಿಸಲು ಕೆಲವು ಸೂಕ್ತ ಮತ್ತು ಪರಿಣಾಮಕಾರಿ ತಂತ್ರಗಳ ತುರ್ತು ಅಗತ್ಯವಾಗಿದೆ ಎಂದು ತಿಳಿಸಿರುವ ಅವರು, ವನ್ಯಜೀವಿಗಳಿಂದಾಗಿ ಈ ಭಾಗದಲ್ಲಿರುವ ಕೃಷಿ ಜಾಗ ಮತ್ತು ಅಡಿಕೆ ತೋಟಗಳಲ್ಲಿ ಸಮಸ್ಯೆ ತುಂಬಾ ತೀವ್ರವಾಗಿದೆ. ಸಾರಂಗ, ಕಾಡೆಮ್ಮೆ, ಕಾಡು ಹಂದಿಗಳು ಮತ್ತು ಜಿಂಕೆಗಳಿಂದಾಗಿ ಆಗಾಗ್ಗೆ ಬೆಳೆ ಹಾನಿ ಉಂಟಾಗುತ್ತಿದೆ. ಚಿರತೆಗಳು ಸಾಮಾನ್ಯವಾಗಿ ಹತ್ತಿರದ ಹಳ್ಳಿಯಿಂದ ದನಗಳನ್ನು ಹೊತ್ತೊಯ್ಯುವುದು ಸಾಮಾನ್ಯವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಾಣಿ ರಕ್ಷಣಾ ಕೇಂದ್ರ ಮತ್ತು ಮೃಗಾಲಯದ ಉದ್ಯಾನವನ್ನು ಮಂಜೂರು ಮಾಡುವಂತೆ ಕೇಂದ್ರ ಸಚಿವರಲ್ಲಿ ವಿನಂತಿಸಲಾಗಿದೆ ಎಂದವರು ತಿಳಿಸಿದ್ದಾರೆ.

error: Content is protected !!