ವಿದ್ಯಾರ್ಥಿಗಳು ಓದುವ ಸಂದರ್ಭದಲ್ಲಿ ಪ್ರೀತಿ ಪ್ರೇಮಕ್ಕೆ ಬೀಳಬಾರದು, ಇದರಿಂದ ಪಾಲಕರಿಗೂ ಆಘಾತ, ತಮ್ಮ ಭವಿಷ್ಯವೂ ಅಯೋಮಯ ವಾಗುತ್ತೆ ಎಂದು, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಪ್ರೋ.ರಾಜಶೇಖರ್ ಹೆಬ್ಬಾರ್.ಸಿ, ಹೆಚ್ಚುವರಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರು ಮಾತನಾಡುತ್ತಿದ್ದರು.
ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಆಗ ತಮ್ಮ ಜೀವನ ಯಶಸ್ವಿ ಯಾಗಲು ಸಾದ್ಯ. ಪ್ರತಿಯೊಬ್ಬರ ಯಶಸ್ಸಿನ ಹಿಂದ ಶ್ರಮ ಇದ್ದೇ ಇರುತ್ತದೆ. ಮುಂದೆ ಜೀವನ ಸುಖಮಯವಾಗಿರುತ್ತದೆ ಎಂದರು.
ಐದು ವರ್ಷ ಸನ್ಯಾಸಿಗಳಂತೆ ಬದುಕಿ, ಓದು ಒಂದೇ ನಿಮ್ಮ ಗುರಿಯಾಗಿರಲಿ. ಯಶಸ್ವಿಯಾದ ನಂತರ ತಮ್ಮ ಅರ್ಧ ಆಯಸ್ಸು ಸುಖ-ಸಂಬೃದ್ಧಿಯಿಂದ ಕೂಡಿರುತ್ತದೆ ಎಂದು ಪ್ರೋ.ಓಂಪ್ರಕಾಶ್ ರಾಜೋಳೆ ಜಂಟಿ ನಿರ್ದೇಶಕರು ನುಡಿದರು.
ಈ ಯಶಸ್ಸಿಗೆ ಸಂತೃಪ್ತಿ ಪಡಬೇಡಿ, ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಿ. ಯಶಸ್ವಿಯಾಗಿ ಅಖಿಲ ಭಾರತ ಮಟ್ಟದ ಕಾರ್ಯಪಡೆಯಲ್ಲಿ ನಮ್ಮ ಕಾಲೇಜಿನ ಕೊಡುಗೆ ಇರಲಿ ಎಂದು ಮಾಜಿ ಪ್ರಾಂಶುಪಾಲ ಹೆಚ್.ಎಮ್.ಸುರೇಶ್ ನುಡಿದರು.
ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಹಕರ ನೀಡುತ್ತಿದೆ. ಪ್ರತೀ ವರ್ಷನಗದು ಪುರಸ್ಕಾರ ನೀಡುತ್ತಾ ಬಂದಿದ್ದೇವೆ, ಮುಂದೆಯು ಯಾವುದೇ ಸಹಕಾರ ಬೇಕಾದರು ನೀಡುತ್ತೇವೆ ಎಂದು ರೋಟರಿ ಜಿ.ವಿಜಯಕುಮರ್ ತಿಳಿಸಿದರು.
ಮಹರಾಷ್ಟ್ರದ ಜಿಲ್ಲಾಧಿಕಾರಿಗಳ ಸತ್ಯ ಕತೆ, ಚಿಕ್ಕವನಿದ್ದಾಗ ಗುರುಗಳು ನೂರು ರೂಪಾಯಿ ನೀಡಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ಒಬ್ಬ ವಿದ್ಯಾರ್ಥಿ ತನ್ನ ತಾಯಿಗೆ ಕನ್ನಡಕ ಖರೀದಿಸಿತ್ತೇನೆ, ಎಂದಾಗ ಅದರೊಂದಿಗೆ ಎರಡು ನೂರು ಹೆಚ್ಚಿಗೆ ಸಾಲ ಎಂದು ನೀಡಿ ನೀನು ದೊಡ್ಡವನಾದ ನಂತರ ತೀರಿಸು ಎಂದರಂತೆ. ಅದರಂತೆ ಮುವತ್ತು ವರ್ಷಗಳ ನಂತರ, ತನ್ನ ಪ್ರಾದ್ಯಾಪಕರಿಗೆ ಹಿಂದಿರುಗಿಸಿದ ಕತೆ ಹೇಳಿ, ತಂದೆ-ತಾಯಿಯರ ಆಶೋತ್ತರಗಳನ್ನು ಪೂರೈಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್.ವಾಗೇಶ್ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೋ.ಕಾಜೀಂ ಷರಫ್ ರವರು ರ್್ಯಂಕ್ ಕಾಲೇಜ್ ಎಂದೇ ಪ್ರಸಿದ್ದಿ ಹೊಂದಿರುವ ನಮ್ಮ ಕಾಲೇಜಿನಲ್ಲಿ ಪ್ರತೀ ವರ್ಷ ಹಲವಾರು ರ್್ಯಂಕ್ ಬರುತ್ತಿವೆ. ಜೊತೆಗೆ ಎನ್.ಸಿ.ಸಿ, ಎನ್.ಎಸ್.ಎಸ್.ನಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಉತ್ತೇಜಿಸಲು ನಮ್ಮ ಪ್ರಾಧ್ಯಾಪಕರು ಮತ್ತು ಹಳೆಯ ವಿದ್ಯಾರ್ಥಿ ಬಳಗ ನಗದು ಪುರಸ್ಕಾರ ನೀಡಿ ಗೌರವಿಸುತ್ತಿದ್ದಾರೆ ಎಂದರು.
ಕೆ.ಎಂ.ನಾಗರಾಜ್ ಸ್ವಾಗತಿಸಿದರು, ಜಗದೀಶ್.ಎಸ್. ಪ್ರಸ್ತಾವಿಕ ನುಡಿ ನುಡಿದರು, ಕು.ಸುಶ್ಮಿತ ಪ್ರಾರ್ಥಿಸಿದರು, ಗಿರಿಜಾ ಹೊಸಮನಿ ವಂದಿಸಿದರು, ಗಾಯಿತ್ರಿ.ಟಿ ನಿರೂಪಿಸಿದರು.