ಶಿವಮೊಗ್ಗ, ಮೇ 12 : 2022-23ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರಾಜ್ಯದ ಇಲಾಖಾ ಕೆರೆಗಳು, ಗ್ರಾಮ ಪಂಚಾಯಿತಿ ಕೆರೆಗಳು, ಜಲಾಶಯಗಳಿಗೆ ಮತ್ತು ನದಿ ಭಾಗಗಳಿಗೆ 70-80 ಎಂ ಎಂ ಗಾತ್ರದ ಬಲಿತ ಬಿತ್ತನೆ ಮೀನುಮರಿಗಳನ್ನು ಸರ್ಕಾರ ನಿಗಧಿಪಡಿಸಿರುವ ದರಗಳಲ್ಲಿ ರಾಜ್ಯದ ನೊಂದಾಯಿತ ಖಾಸಗಿ ಮೀನು ಕೃಷಿಕರಿಂದ ಖರೀದಿ ಮಾಡಿ ದಾಸ್ತಾನು ಮಾಡಲು ಉದ್ದೇಶಿಸಿದ್ದು, ನೊಂದಾಯಿತ ಆಸಕ್ತ ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನಿಸಿದೆ.
ನೊಂದಾಯಿತ ಖಾಸಗಿ ಮೀನು ಕೃಷಿಕರು ತಮ್ಮ ಮೀನುಮರಿ ಪಾಲನೆ ಕೇಂದ್ರಗಳಿಂದ ಸರಬರಾಜು ಮಾಡಲು ಸಾಧ್ಯವಿರು ಬಲಿತ ಬಿತ್ತನೆ ಮೀನುಮರಿಗಳ ವಿವರಗಳನ್ನು ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆ ಕಚೇರಿಗಳಿಂದ ನಿಗಧಿತ ನಮೂನೆ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿ: 31/05/2022 ರೊಳಗಾಗಿ ಸಲ್ಲಿಸುವುದು. ಹಾಗೂ ಇದುವರೆಗೂ ಕೊಳಗಳನ್ನು ನಿರ್ಮಿಸಿ ನೊಂದಣಿಯಾಗದೇ ಇರುವ ಮೀನುಮರಿ ಪಾಲನೆದಾರರು/ಮೀನುಕೃಷಿಕರು ದಿ: 25/05/2022 ರೊಳಗಾಗಿ ನೊಂದಣಿ/ನೊಂದಣಿ ನವೀಕರಣ ಮಾಡಕೊಂಡು ಅರ್ಜಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222716 ಅಥವಾ ಆಯಾ ತಾಲೂಕಿನ ಮೀನುಗಾರಿಕೆ ಕಚೇರಿಗಳನ್ನು ಸಂಪರ್ಕಿಸುವುದು.