ಶಿವಮೊಗ್ಗ, ಡಿಸೆಂಬರ್ 03: ಮಾವು ಬೆಳೆಗೆ ಅಗತ್ಯವಾದ ಪೋಷಕಾಂಶಗಳಾದ ಕ್ಯಾಲ್ಸಿಯಂ, ಬೋರಾನ್, ಮೆಗ್ನಿಸಿಯಂ ಸೇರಿದಂತೆ ಮುಂತಾದ ಲಘು ಪೋಷಕಾಂಶಗಳು ಮಾವು ಸ್ಪೆಷಲ್‍ನಲ್ಲಿ ಲಭ್ಯವಿರುತ್ತದೆ. ಹೂ ಮತ್ತು ಕಾಯಿ ಕಚ್ಚಲು, ಹಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಅಧಿಕ ಇಳುವರಿ ಪಡೆಯಲು ಪೋಟ್ಯಾಷಿಯಂ, ನೈಟ್ರೇಟ್ 20ಗ್ರಾಂ/ಲೀ, ಯೂರಿಯಾ 30ಗ್ರಾಂ/ಲೀ ನೀರಿನಲ್ಲಿ ಮಿಶ್ರಣಮಾಡಿ ಎಲೆಗಳಿಗೆ ಈ ತಿಂಗಳಿನಲ್ಲಿ ಸಿಂಪಡಿಸುವುದರಿಂದ ಮರದ ಎಲೆಗಳು ಆರೋಗ್ಯ ಮತ್ತು ಹಣ್ಣಿನ ಗಾತ್ರ ಹಾಗೂ ಗುಣ್ಣಮಟ್ಟ ಹೆಚ್ಚಗುವುದು.
ಮುಂಜಾಗ್ರತ ಕ್ರಮ : ಕೀಟ ಮತ್ತು ರೋಗಗಳಿಂದ ಗಿಡಗಳನ್ನು ಸಂರಕ್ಷಣೆ ಮಾಡಲು ರೈತರು ಅಸಿಫೇಟ್ 75%, 1.5 ಗ್ರಾಂ/ಲೀ ಅಥವಾ ಥೈಯಾಮೆಥೋಕ್ಸಾಮ್ 0.25 ಗ್ರಾಂ/ಲೀ, ಶೀಲೀಂದ್ರ ನಾಶಕ ಕಾರ್ಬನ್‍ಡೈಜಿಮ್ 1.5 ಗ್ರಾಂ/ಲೀ ಅಥವಾ ಕಾರ್ಬನ್‍ಡೈಜಿಮ್ 1.5 ಗ್ರಾಂ/ಲೀ, ಡೈಥೇನ್ ಎಂ-45, 2ಗ್ರಾಂ/ಲೀ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಕುಡಿ ಕೊರಕ, ಜಿಗಿ ಹುಳು, ನುಸಿ ಕೀಟಗಳ ಹಾಗೂ ಶೀಲೀಂದ್ರಗಳ ಭಾದೆಯನ್ನು ತಡೆಯಬಹುದಾಗಿದೆ.
ಹಣ್ಣಿನ ನೊಣದ ಕೋಶಗಳು ಗಿಡದ ಕೆಳಗಿನ ಭೂಮಿಯಲ್ಲಿ ಅಡಗಿಕೊಂಡಿರುತ್ತದೆ. ಇವುಗಳನ್ನು ನಾಶ ಪಡಿಸಲು ಇಮಿಡಾಕ್ಲೋಪ್ರಿಡ್ 0.4 ಮೀ,ಲೀ, ನೀರಿನಲ್ಲಿ ಕರಗುವ ಗಂಧಕ 3.0 ಗ್ರಾಂ/ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ 1/2 ರಿಂದ 1 ಕೆ.ಜಿ ವರೆಗೆ ಒಳ್ಳೆಯ ಗುಣ ಮಟ್ಟದ ಬೇವಿನ ಹಿಂಡಿಯನ್ನು ಬಳಕೆಯಿಂದ ಹಂಗಾಮಿಗೆ ಹೆಚ್ಚಾಗುವ ಹಣ್ಣಿನ ನೊಣದ ಬಾಧೆಯನ್ನು ತಡೆಯಬಹುದಾಗಿದೆ.
ಮಾವು ಬೆಳೆ ಹೂ ಬಿಟ್ಟಿರುವ ಸಂದರ್ಭದಲ್ಲಿ ಪರಾಗಸ್ಪರ್ಶ ಕ್ರಿಯೆಯು ಜೇನು ಹುಳುಗಳಿಂದ ನಡೆಯುವುದರಿಂದ ಯಾವುದೇ ಕಾರಣಕ್ಕೂ ಕೀಟನಾಶಕ ಮತ್ತು ಶಿಲೀಂಧ್ರ ನಾಶಕಗಳ ಬಳಕೆಯನ್ನು ಹೂ ಬಿಟ್ಟಿರುವ ಸಮಯದಲ್ಲಿ ಕೈಗೊಳ್ಳಬಾರದು. ಸಿಂಪರಣೆಯನ್ನು ಹೂ ಬಿಡುವ ಮುಂಚೆ ಮತ್ತು ಕಾಯಿ ಕಟ್ಟಿದ ನಂತರ ಕೈಗೊಳ್ಳುವಂತೆ ಪ್ರಕಟಣೆಯಲ್ಲಿ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕ ತಿಳಿಸಿದ್ದಾರೆ.