ಭಾರತವು ಮಾವಿನ ತವರೂರಾಗಿದ್ದು ಇದ್ದನ್ನು ಸುಮಾರು ವರ್ಷಗಳಿಂದ ಬೆಳೆಯಲಾಗುತ್ತದೆ. ಹಣ್ಣುಗಳ ರಾಜ ಎನ್ನಲಾಗುವ ಮಾವಿನ ಹಣ್ಣನ್ನು ಭಾರತವಲ್ಲದೆ ದಕ್ಷಿಣ ಏಷಿಯಾ ಖಂಡದ ಅನೇಕ ರಾಷ್ಟ್ರಗಳಲ್ಲಿ ಬೆಳೆಯಲಾಗತ್ತದೆ. ಮಾವಿನ ಗಿಡಗಳು ಹೂ ಬಿಡಲು ಪ್ರಾರಂಭಿಸಿದ್ದು, ಉತ್ತಮ ಮಾವು ಫಸಲಿಗೆ ಬೆಳೆಯ ವಿವಿಧ ಹಂತಗಳಲ್ಲಿ ಸೂಕ್ತ ನಿರ್ವಹಣೆ ಮುಖ್ಯ. ಅದರಲ್ಲೂ ಮಾವು ಬೆಳೆಯ ಕೀಟ ರೋಗಗಳನ್ನು ಸೂಕ್ತ ಹಂತದಲ್ಲಿ ಗುರುತಿಸಿ ಅವುಗಳ ಸಮರ್ಪಕ ನಿರ್ವಹಣೆ ಮಾಡದಿದ್ದಲ್ಲಿ ಅಪಾರ ನಷ್ಟವಾಗುವುದು. ಮಾವು ಹೂ ಬಿಟ್ಟಾಗಿನಿಂದ ಪ್ರಾರಂಭವಾಗುವ ಪೀಡೆ ನಿರ್ವಹಣೆಯ ಕ್ರಮಗಳನ್ನು ಫಸಲು ಮಾಗುವವರೆಗೆ ಮುಂದುವರೆಸುವುದು ಅವಶ. ಮಾವಿಗೆ ಜಿಲ್ಲೆಯಲ್ಲಿ ಸುಮಾರು ಕೀಟಗಳು ಬಾಧಿಸುತ್ತಿದ್ದು ಅದರಲ್ಲಿಯೂ ಸದ್ಯಕ್ಕೆ ಹೂವಾಡುವ ಹಂತದಲ್ಲಿ ಅಧಿಕವಾಗಿ ಹಾಗೂ ಪ್ರಮುಖವಾಗಿ ಹಾನಿ ಮಾಡುತ್ತಿರುವ ಕೀಟ ವೆಂದರೆ ಮಾವಿನ ಜಿಗಿಹುಳು.
ಹೋಮೋಪ್ವರ ಗುಂಪಿಗೆ ಸೇರಿದ ಈ ಕೀಟಗಳಲ್ಲಿ 3 ಜಾತಿಯ ಕೀಟಗಳಿದ್ದು ವೈಜ್ಞಾನಿಕವಾಗಿ ಅವುಗಳನ್ನು ಅಮರಿಟೋಡಸ ಅಟ್ಕಿನ್ಸೋನಿ, ಈಡಿಯೋಸ್ಕೋಪಸ ಕ್ಲೈಪೀಯಾಲಿಸ್, ಹಾಗೂ ಈಡಿಯೋಸ್ಕೋಪಸ್ ನೀವೀಯೋಸರಸ್ ಎಂದು ಕರೆಯಲಾಗುತಿದೆ. ಸಾವಿರಾರು ಪ್ರೌಡ ಕೀಟಗಳು ಗಿಡದ ಕಾಂಡ ಮತ್ತು ಟೊಂಗೆಯ ಮೇಲೆ ಹಾಗೂ ತೊಗಟೆಯ ಕೆಳಗಡೆ ಬೇಸಿಗೆಯ ಮೇ-ಜೂನ ತಿಂಗಳು ಹಾಗೂ ಚಳಿಗಾಲದ ಅಕ್ಟೋಬರ- ಜನವರಿ ತಿಂಗಳುಗಳಲ್ಲಿ ಜೀವಿಸುತ್ತವೆ. ಸಾಮಾನ್ಯವಾಗಿ ವರ್ಷವೆಲ್ಲಾ ಚುರಕಾಗಿರುವ ಈ ಕೀಟಗಳು ಚಳಿಗಾಲದಲ್ಲಿ ಫೆಬ್ರವರಿ ತಿಂಗಳಿನಿಂದ ಹೂವಿನ ಮೊಗ್ಗು ಮತ್ತು ಹೂ ಗೊಂಚಲುಗಳ ಮೇಲೆ ಕುಳಿತು ರಸಹೀರುವುದಕ್ಕೆ ಪ್ರಾರಂಭಿಸುತ್ತವೆ ಮಾರ್ಚ ಮೊದಲನೆಯ ವಾರದಲ್ಲಿ ಈ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ ನಂತರ ಹೂ ಗೊಂಚಲುಗಳಲ್ಲಿ ಹಾಗೂ ಮೃದುವಾದ ಎಲೆಗಳ ಮೇಲೆ ಬಾದೆಯನ್ನುಂಟು ಮಾಡುತ್ತವೆ. ಬಾಧೆಯಿಂದಾಗಿ ಅಥವಾ ಹಾಗೂ ಹೂಗೊಂಚಲಿನಿಂದ ರಸ ಹೀರುವುದಕ್ಕೆ ಪ್ರಾರಂಭಿಸುತ್ತವೆ.
ಇದರಿಂದಾಗಿ ಬೆಳೆಯ ಕೆಳಭಾಗದ ಎಲೆಗಳ ಮೇಲೆ ಸಕ್ಕರೆಯಂತಹ ದ್ರಾವಣವನ್ನು ಸ್ರವಿಸುತ್ತವೆ ಅದರ ಮೇಲೆ ಕಪ್ಪಾದ ಶಿಲೀಂದ್ರ ಬೆಳೆಯುತ್ತದೆ. ಮಾವು ಹೂ ಬಿಡುವ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಪೂರ್ಣ ಮಾವಿನ ಬೆಳೆಯೇ ನಾಶವಾಗುವಂತೆ ಮಾಡುತ್ತವೆ. ಪ್ರೌಢ ಮತ್ತು ಅಪ್ಸರೆ ಕೀಟಗಳೆರಡು ಎಲೆಯ ಕೆಳಭಾಗದಲ್ಲಿದ್ದುಕೊಂಡು, ಹೂವು ಹಾಗೂ ಹೂ ಗೊಂಚಲಿನಿಂದ ರಸಹಿರುತ್ತವೆ. ಇದರಿಂದಾಗಿ ಹೂಗಳು ಒಣಗಿದಂತಾಗಿ ಕಂದು ಬಣ್ಣಕ್ಕೆ ತಿರುಗಿ ಕೊನೆಗೆ ಉದುರುತ್ತವೆ. ಎಲೆ, ಕಾಂಡ ಹಾಗೂ ಹಣ್ಣುಗಳ ಮೇಲೆ ಸಕ್ಕರೆಯಂತಹ ಅಂಟುದ್ರವ ಈ ಕೀಟ ಶ್ರವಿಸುವುದರಿಂದ ಇದರ ಮೇಲೆ ಕಪ್ಪಾದ ಶಿಲೀಂದ್ರ ಬೆಳೆಯುವುದರಿಂದ ದ್ವಿತಿಸಂಶ್ಲೇಷಣೆ ಕ್ರೀಯೆಯು ವ್ಯತ್ಯೆಯವಾಗಿ, ಹೂವು ಹಿಡಿಯದೇ ಕೆಲವು ಸಲ ಅರೆಬಲಿತ ಮಿಡಿಗಾಯಿಗಳು ಉದುರುತ್ತವೆ. ಚಿಕ್ಕಗಿಡಗಳ ಬಳವಣಿಗೆಯು ಕುಂಟಿತವಾಗತ್ತದೆ ಹಾಗೂ ಬೆಳೆದ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ಹೊಂದಿರುವದಿಲ್ಲ. ಈ ಕೀಟವು ಶೇ. 25 ರಿಂದ 60 ರಷ್ಟು ಒಳುವರಿ ನಷ್ಟವುಂಟುಮಾಡವ ಸಾಮಥ್ರ್ಯ ಹೊಂದಿದೆ.
ಬೂದಿರೋಗ ರೋಗ ಲಕ್ಷಣಗಳು: ಹೂ ಹಾಗೂ ಕಾಯಿ ಬಿಡುವ ಹಂತದಲ್ಲಿ ಹೆಚ್ಚಾಗಿ ಕಂಡು ಬರುವ ಈ ರೋಗದ ತೀವ್ರತೆ ರಾತ್ರಿಯಲ್ಲಿ ಕಡಿಮೆ ತಾಪಮಾನ ಹಾಗೂ ಹಗಲಿನಲ್ಲಿ ಹೆಚ್ಚು ತಾಪಮಾನವಿರುವಂತಹ ಚಳಿಗಾಲದ ವಾತಾವರಣದಲ್ಲಿ ಹೆಚ್ಚುವದು. ಹೂ ಗೊಂಚಲುಗಳ ಮೇಲೆ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆಯಾಗಿ ನಂತರ ಸಣ್ಣ ಕಾಯಿ, ಎಲೆ ಹಾಗೂ ರೆಂಬೆಗಳ ಮೇಲೆ ಇದೆ ಲಕ್ಷಣಗಳು ಕಂಡು ಬಂದು, ರೋಗ ಪೀಡಿತ ಹೂಗಳ ಉದುರುವುದಲ್ಲದೆ, ಎಳೆಯ ಕಾಯಿಗಳು ಸಂಪೂರ್ಣವಾಗಿ ರೋಗದಿಂದ ಆವೃತವಾಗಿ ಉದುರುತ್ತವೆ.
ಜಿಗಿ ಹುಳು ಹಾಗೂ ಬೂದಿರೋಗದ ನಿರ್ವಹಣೆ:
ಗಿಡಗಳನ್ನು ಒತೋತ್ತಾಗಿ ನಾಟಿ ಮಾಡಬಾರದು ಹಾಗೂ ತೋಟವನ್ನು ಸ್ವಚ್ಛವಾಗಿಡಿ, ತೋಟವು ಒತ್ತೋತ್ತಾಗಿದ್ದಲ್ಲಿ ಕೆಲಕಾಂಡಗಳನ್ನು ಚಳಿಗಾಲದಲ್ಲಿ ಕಡಿದು ಹೆಚ್ಚಿನ ಗಾಳಿ ಹಾಗೂ ಬೆಳಕು ಸಿಗುವಂತೆಮಾಡಿ.
ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೇ ಗಿಡಗಳಿಗೆ 4ಗ್ರಾಂ ಕಾರ್ಬರಿಲ್ 50 ಡಬ್ಲು ಪಿ ಅಥವಾ 2 ಮಿ.ಲೀ ಮೇಲಾಥಿಯಾನ್ 50 ಇಸಿ ಅಥವಾ 0.3 ಮಿ.ಲೀ. ಇಮಿಡಾಕ್ಲೊಪ್ರಿಡ್ 17.8 ಎಸ್.ಎಲ್. ಅಥವಾ 0.2 ಗ್ರಾಂ. ಅಸಿಟಾಮೆಪ್ರಿಡ್ 25 ಡಬ್ಲುಡಿಜಿ ಅಥವಾ 1.25 ಮಿ.ಲೀ ಮೊನೋಕ್ರೋಟೋಫಾಸ್ 36 ಎಸ್ ಎಲ್ನ ಜೊತೆಗೆ ಶಿಲೀಂದ್ರನಾಶಕವಾದ ನೀರಿನಲ್ಲಿ ಕರಕುವ ಗಂಧಕ 2 ಗ್ರಾಂ. ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಅಥವಾ ಥಿಯೊಫಿನೆಟ್ ಮಿಥೈಲ್ 1 ಗ್ರಾಂ ಅಥವಾ ಗಂಧಕ 3 ಗ್ರಾಂ ಅಥವಾ ಕಾರ್ಬೆಂಡಾಜಿಮ್ 1 ಗ್ರಾಂ ಅಥವಾ ಡೈಫನಕೊನಜೋಲ್ 1 ಮಿ. ಲೀ.ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಿರಿ. ಅವಶ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 15-20 ದಿನಗಳ ನಂತರ ಮತ್ತೊಮ್ಮೆ ಕೈಗೊಳ್ಳಿ. ತೋಟಕ್ಕೆ ಪದೇಪದೇ ನೀರುಣಿಸುದಾಗಲೀ ಅಥವಾ ಸಾರಜನಕ ಯುಕ್ತ ಗೊಬ್ಬರ ನೀಡುವುದಾಗಲಿ ಮಾಡಬಾರದು.
• ರಾಜು ಜಿ. ತೆಗ್ಗೆಳ್ಳಿ, ಜಹೀರ್ ಅಹಮ್ಮದ್ ಬಿ,