ಕನಾ೯ಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡು ಬರುವ ವಿಶಿಷ್ಟ ಗೋ ತಳಿ ಮಲೆನಾಡು ಗಿಡ್ಡ ಇದು,ಈ ತಳಿಯನ್ನು ಹಾಲಿಗಾಗಿ ಹೊಲದ ಕೆಲಸಗಳಿಗಾಗಿ ಮತ್ತು ಗೊಬ್ಬರಕ್ಕಾಗಿ ಉಪಯೋಗಿಸುತ್ತಾರೆ. ಇವುಗಳ ಫಲವಂತಿಕೆಯೂ ಗಮನಾಹ9. ಏಕೆಂದರೆ ಪ್ರತೀ ಒಂದರಿಂದ ಒಂದೂವರೆ ವಷ9ಕ್ಕೊಂದು ಕರುವನ್ನು ಹಾಕುತ್ತದೆ. 2012 ನೇ ಜಾನುವಾರು ಗಣತಿಯ ಪ್ರಕಾರ ಮಲೆನಾಡು ಗಿಡ್ಡ ಸಂಖ್ಯೆ 12,82,121 ರಷ್ಟಿದೆ. ಮಲೆನಾಡು ಪ್ರತೀ ಮನೆಯಲ್ಲೂ ಕಾಣ ಸಿಗುವ ಈ ತಳಿಯ ಶ್ರೇಷ್ಟತೆ ಇರುವುದು ಅವುಗಳ ಕಷ್ಟ ಸಹಿಷ್ಣುತೆಯಲ್ಲಿ, ಸತತವಾಗಿ ದಿನಗಟ್ಟಲೆ ಸುರಿಯುವ ಮಳೆಯಾಗಲೀ, ಚಳಿಯಾಗಲಿ ಅಥವಾ ಬಿಸಲಿಲಾಗಲಿ ಎಂತಹ ಪರಿಸ್ತಿತಿಯಲ್ಲಿಯೂ ಎಂದಿನಂತೆ ಕಾಡಿಗೆ ಹೋಗಿ ಮೇಯ್ದು ಬರಬಲ್ಲದು.
ಮಲೆನಾಡು ಗಿಡ್ಡ ತಳಿ ಕಂಡು ಬರುವ ಪ್ರದೇಶಗಳು
ಮಲೆನಾಡು ಗಿಡ್ಡ ತಳಿ ಕನಾ9ಟಕದ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಹಾಗು ಕರಾವಳಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
ಮಲೆನಾಡು ಗಿಡ್ಡ ತಳಿಯ ವಿಷೇಷ ಸಾಕಾಣಿಕೆ ಪದ್ದತಿಗಳು
ಹಗಲು ಹೊತ್ತಿನಲ್ಲಿ ಕಾಡು ಮೇಡು ಹೊಲಗಳಲ್ಲಿ ಸಂಚರಿಸಿ ಮೇಯ್ದುಕೊಂಡು ಸಂಜೆ ಬಂದ ನಂತರ ಸ್ವಲ್ಪ ಪ್ರಮಾಣದ ಹಸಿರು ಹುಲ್ಲು, ಒಣ ಹುಲ್ಲು, ಹುರುಳಿ ನುಚ್ಚು, ಅಕ್ಕಿ ನುಚ್ಚು, ಅಕ್ಕಿ ತೌಡು, ಹಿಂಡಿ ನೀಡುತ್ತಾರೆ. ಇವುಗಳನ್ನು ರಾತ್ರಿ ಹೊತ್ತಿನಲ್ಲಿ ಕಚ್ಚಾ . ಕೊಟ್ಟಿಗೆಯಲ್ಲಿ ಬಿಡುತ್ತಾರೆ. ಕೊಟ್ಟಿಗೆ ನೆಲಕ್ಕೆ ಹಸಿರು ಸೊಪ್ಪು ಅಥವಾ ಒಣಗಿದ ಎಲೆಗಳನ್ನು ಹರಡಿಸುತ್ತಾರೆ. ಪ್ರತಿ ದಿನ ಸ್ವಚ್ಚಗೊಳಿಸುವ ಬದಲು ಅದರ ಮೇಲೆಯೇ ಇನ್ನೊಂದು ಪದರು ಹಸಿರು ಸೊಪ್ಪನ್ನು ಹಾಕುತ್ತಾರೆ. ಹದಿನೈದರಿಂದ ಒಂದು ತಿಂಗಳಿಗೊಮ್ಮೆ ನೆಲವನ್ನು ಸ್ವಚ್ಚ ಮಾಡಿ ಸೊಪ್ಪು, ಸಗಣಿ, ಗಂಜಲ ಜೊತೆ ಮಿಶ್ರಿತ ಗೊಬ್ಬರವನ್ನು ತಿಪ್ಪೆ ಗುಂಡಿಯಲ್ಲಿ ಶೇಖರಿಸಿಡುತ್ತಾರೆ. ಇದು ಉತ್ತಮ ಗೊಬ್ಬರವಾಗಿ ಬಳಕೆಯಾಗುತ್ತದೆ.
ಮಲೆನಾಡು ತಳಿಯ ಗುಣಲಕ್ಷಣಗಳು
ದೇಹ ಕುಬ್ಜ [ ಸಣ್ಣ ಗಾತ್ರದ ತಳಿ] ತೂಕ 80 ರಿಂದ 120 ಕೆಜಿ, ಎತ್ತರ 81 ರಿಂದ 88 ಸೆ.ಮೀ, ಉದ್ದ 88 ರಿಂದ 90 ಸೆಂ. ಮೀ, ಬಾಲ ಉದ್ದ 51 ರಿಂದ 53 ಸೆಂ,ಮೀ, ಬಣ್ಣ ಕಪ್ಪು, ಕೆಂದು, ಬೂದು ಕೆಂಪು, ಬಿಳಿ ಕಪ್ಪು ಹಂಡ, ಕಪಿಲೆ [ಕೌಲು], ಕೆಂಪು ಹಂಡ, ಸಾಮಾನ್ಯವಾಗಿ ಗೊರಸು, ಕಣ್ಣು ರೆಪ್ಪೆ, ಬಾಲದ ತುದಿ ಹಾಗು ಕೊಂಬು ಕಪ್ಪು ಬಣ್ಣದಾಗಿರುತ್ತದೆ. ಬಾಲ ಉದ್ದವಾಗಿದ್ದು ನೆಲಕ್ಕೆ ತಾಗುವಂತಿರುತ್ತದೆ. ಕೆಚ್ಚಲು ಚಿಕ್ಕದಾಗಿದ್ದು ಬಟ್ಟಲಿನಂತಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿ9ಸಿ
ಮಲೆನಾಡು ಗಿಡ್ಡ ತಳಿ ಸಂಶೋಧನೆ ಮತ್ತು ಮಾಹಿತಿ ಕೇಂದ್ರ
ಪ್ರಾಣಿ ಅನುವಂಶೀಯತೆ ಹಾಗು ತಳಿ ಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ
ಶಿವಮೊಗ್ಗ-577204
ದೂರವಾಣಿ: 8904052389