ಶಿವಮೊಗ್ಗ ಏಪ್ರಿಲ್ 28: ದಿನಾಂಕ: 28-04-2022 ರಂದು ಬೀದರ್ನಲ್ಲಿ ನಡೆದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ಗೆಹ್ಲೋಟ್ರವರು ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸತೀಶ್.ಜಿ.ಎಂ ಇವರ ಸಂಶೋಧನಾ ಪ್ರಬಂಧಕ್ಕೆ ಚಿನ್ನದ ಪದಕ ಮತ್ತು ಪಿ.ಹೆಚ್.ಡಿ ಡಾಕ್ಟರೇಟ್ ಪ್ರದಾನ ಮಾಡಿದರು.
ಡಾ.ಸತೀಶ್ .ಜಿ.ಎಂ ರವರು ಮಲೆನಾಡುಗಿಡ್ಡ ತಳಿ ಕುರಿತು ಮಂಡಿಸಿರುವ “ಮಾಲ್ಯೂಕ್ಯುಲಾರ್ ಕ್ಯಾರಕ್ಟರೈರೇಶನ್ ಆಫ್ ಟೂಲ್ ಲೈಕ್ ರಿಸೆಪ್ಟಾರ್ ಇನ್ ಮಲೆನಾಡ್ ಗಿಡ್ಡ ಕ್ಯಾಟಲ್” ಸಂಶೋಧನಾ ಮಹಾ ಪ್ರಬಂಧಕ್ಕೆ ಚಿನ್ನದ ಪದಕದೊಂದಿಗೆ ಪಿ.ಹೆಚ್.ಡಿ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಪಶು ವೈದ್ಯಕೀಯ ಮಹಾವಿದ್ಯಾಲಯ ಗದಗದ ಡೀನ್ರವರಾದ ಪ್ರೊ. ಆರ್. ನಾಗರಾಜ್ರವರು ಇವರಿಗೆ ಮಾರ್ಗದರ್ಶಕರಾಗಿದ್ದರು.
