ಶಿವಮೊಗ್ಗ ಜುಲೈ 05 : ಗ್ರಾಹಕರ ಸಂರಕ್ಷಣಾ ಕಾಯಿದೆ, 2019 ಕಲಂ 75 ರ ನಿಬಂಧನೆಗಳನ್ವಯ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಹ ಮಧ್ಯಸ್ಥಿಕೆಗಾರರ ಆಯ್ಕೆಯ ಮೂಲಕ ಪಟ್ಟಿಯನ್ನು ಎಂಪೆನೆಲ್ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಭಾರತ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ಗ್ರಾಹಕ ಆಯೋಗದ ನಿವೃತ್ತ ಸದಸ್ಯರು, ನಿವೃತ್ತ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು, ನಿವೃತ್ತ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಥವಾ ರಾಜ್ಯದ ಉನ್ನತ ನ್ಯಾಯಾಂಗ ಸೇವೆಗಳ ಇತರ ನಿವೃತ್ತ ಸದಸ್ಯರು, ಕನಿಷ್ಟ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಅನುಭವವನ್ನು ಹೊಂದಿರುವ ನಿವೃತ್ತ ನ್ಯಾಯಾಂಗ ಅಧಿಕಾರಿಗಳು, ವಕೀಲರ ಸಂಘದಲ್ಲಿ ಕನಿಷ್ಟ 10 ವರ್ಷಗಳ ಅನುಭವ ಹೊಂದಿರುವ ವಕೀಲರು, ಭಾರತ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೋಶಗಳಲ್ಲಿ ಅನುಮೋದಿತರಾಗಿರುವ ಮಧ್ಯಸ್ಥಿಕೆದಾರರು, ಮಧ್ಯಸ್ಥಿಕೆ ಅಥವಾ ಸಂಧಾನದಲ್ಲಿ ಕನಿಷ್ಟ 5 ವರ್ಷಗಳ ಅನುಭವ ಹೊಂದಿರುವ ವ್ಯಕ್ತಿ, ಕನಿಷ್ಟ 15 ವರ್ಷ ಅನುಭವ ಹೊಂದಿರುವ ತಜ್ಞರು ಅಥವಾ ಇತರ ವೃತ್ತಿಪರರು ಅಥವಾ ನಿವೃತ್ತ ಹಿರಿಯ ಅಧಿಕಾರಿಗಳು ಅಥವಾ ನಿವೃತ್ತ ಕಾರ್ಯನಿರ್ವಾಹಕರು ಅರ್ಜಿ ಸಲ್ಲಿಸಬಹುದು. ಮಧ್ಯಸ್ಥಿಕೆಗಾರರ ಶುಲ್ಕವನ್ನು ಗ್ರಾಹಕ ಸಂರಕ್ಷಣಾ(ಮಧ್ಯಸ್ಥಿಕೆ)ನಿಬಂಧನೆಗಳನ್ವಯ ಪಾವತಿಸಲಾಗುವುದು.
     ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ವೆಬ್‍ಸೈಟ್ https://kscdrc.karnataka.gov.in  ಇಲ್ಲಿ ಡೌನ್‍ಲೋಡ್ ಮಾಡಿಕೊಂಡು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಅಥವಾ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಇ-ಮೇಲ್ smgdcf-ka@nic.in ಮೂಲಕ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಶಿವಮೊಗ್ಗ 577201 ಇವರಿಗೆ ದಿ: 09-08-2022 ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!