ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ನೆರವು ಅತ್ಯಂತ ಅಗತ್ಯ. ಇಂದು ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಶಿವಮೊಗ್ಗ ಜಿಲ್ಲೆಯ ಸಾಕಷ್ಟು ಸಂಘ-ಸಂಸ್ಥೆಯವರು ತಾವೇ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸಹಕಾರ ನೀಡಿ ಮತದಾನ ಜಾಗೃತಿ ಕಾರ್ಯಕ್ರಮ ನೇರವಾಗಿ ಮತದಾರರಿಗೆ ತಲುಪಲು ಸಹಕಾರವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್ರವರು ನುಡಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕ್ಯಾಸ್ಟ್ ಸಭಾಂಗಣದಲ್ಲಿ “ಶಿವಮೊಗ್ಗ ವಿತರಕರ ಸಂಘ”, ಶಿವಮೊಗ್ಗ ಇವರ ವತಿಯಿಂದ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಹಾಗೂ ಜಾತಕ್ಕೆ ಚಾಲನೆ ನೀಡುತ್ತಾ ಮಾತನಾಡಿದರು. ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವುದರ ಜೊತೆಗೆ ಉಳಿಸೋಣ. ಆನಸಾಮಾನ್ಯರ ಶಕ್ತಿ ಮತಚಲಾವಣೆ ಹಾಗೂ ಓಟ್ ಮಾಡಿದವನೇ ನಿಜವಾದ ಹೀರೋ ಮತ್ತು ಮತಚಲಾವಣೆ ನಿಮ್ಮ ಹಕ್ಕು. ತಪ್ಪದೇ ಮತ ಚಲಾಯಿಸಿ. ಜಿಲ್ಲೆಯ ಹೆಮ್ಮೆಯ ಪ್ರಜೆಗಳಾದ ನಾವು ಯಾವುದೇ ಲಿಂಗಭೇದವಿಲ್ಲದೇ, ಜಾತಿಧರ್ಮವೆನ್ನದೇ, ವಿಕಲಚೇತನರೆನ್ನದೆ ಹಾಗೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಪ್ರಜಾಪ್ರಭುತ್ವದ ಮೇಲಿನ ದೃಢವಿಶ್ವಾಸದಿಂದ ನಾವು ಮತದಾನ ಮಾಡುವುದಲ್ಲದೇ ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸುವ ಮೂಲಕ ಶೇ. 100%ರಷ್ಟು ಮತದಾನ ಮಾಡಿ ಶಿವಮೊಗ್ಗ ಜಿಲೆಯನ್ನು ರಾಜ್ಯಕ್ಕೆ ಮತದಾನ ಪ್ರಕ್ರಿಯೆಯಲ್ಲಿ ನಂ. 1 ಮಾಡೋಣ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು “ಶಿವಮೊಗ್ಗ ವಿತರಕರ ಸಂಘದ ಅಧ್ಯಕ್ಷರಾದ ಯು.ಎಂ.ಶಿವರಾಜ್ರವರು ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೆ.ಆರ್.ವಾಸುದೇವ್, ಕಾರ್ಯದರ್ಶಿ ಗೋಪಿನಾಥ್, ನಿದೇಶಕರಾದ ಜಿ.ವಿಜಯಕುಮಾರ್, ಮಾಜಿಅಧ್ಯಕ್ಷರು ಪ್ರಕಾಶ, ಮೋಹನ್, ದೇವರಾಜ್, ಸುನೀಲ್, ಅನೂಪ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.