ಮಕ್ಕಳು ವಿದ್ಯೆಯಲ್ಲಿ ಎಷ್ಟೆ ನೈಪುಣ್ಯತೆ ಪಡೆದರು ಜೀವನ ಕೌಶಲ್ಯಗಳು ಅಗತ್ಯವಾಗಬೇಕು. ಅವರ ಉನ್ನತ ಶಿಕ್ಷಣಕ್ಕೆ ಹಾಗೂ ಪರಿಪೂರ್ಣ ವಿದ್ಯಾರ್ಥಿಯಾಗಲು ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸಿನ ಮೆಟ್ಟಿಲೇರಲು ಕೌಶಲ್ಯಗಳು ಅತಿ ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಹಾಗೂ ರೋಟರಿ ಮಾಜಿ ಸಹಾಯಕ ಗರ‍್ನರ್ ಜಿ. ವಿಜಯ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ಬೆಳಿಗ್ಗೆ ನಗರದ ಮೈಸೂರು ಎಜುಕೇಶನ್ ಅಕಾಡೆಮಿ ಟ್ರಸ್ಟ್ನ ಗಂಗೋತ್ರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್‌ನಲ್ಲಿ ಆಯೋಜಿಸಲಾಗಿದ್ದ, ಪ್ರಥಮ ವರ್ಷದ ಕಾಲೇಜು ಪ್ರಾರಂಭೋತ್ಸವ, ಮಾಹಿತಿ ಕಾರ್ಯಗಾರದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಹಾಗೂ ಮಾತಿನಕಲೆ ಬೆಳೆಸಿಕೊಳ್ಳುವುದರ ಜೊತೆಗೆ, ಪ್ರತಿನಿತ್ಯ ಇಂಗ್ಲೀಷ್ ಪತ್ರಿಕೆ ಓದುವುದರ ಜೊತೆಗೆ ಇಂಗ್ಲೀಷ್ ವಾರ್ತೆಗಳನ್ನು ಹಾಗೂ ಯಶಸ್ಸಿನ ಸ್ಟೋರಿಗಳನ್ನು ವೀಕ್ಷಿಸಬೇಕು ಮುಂದೆ ಗುರಿ ಇರಬೇಕು, ತಂತ್ರಜ್ಞಾನ ಮುಂದುವರೆದ ಹಾಗೆ ವಿಫುಲವಾದ ಉದ್ಯೋಗಾವಕಾಶಗಳು ದೊರೆಯುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಕಾರ್ಯದರ್ಶಿ ರೇಣುಕಾರಾಧ್ಯರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಶಿಸ್ತು, ಜೀವನಕ್ರಮ ಅವರನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಮೊಬೈಲ್‌ನ್ನು ಅವಶ್ಯಕತೆಗೆ ತಕ್ಕಂತೆ ಬಳಸಿ ಉತ್ತಮ ಜೀವನಾಭ್ಯಾಸಗಳನ್ನು ಬೆಳೆಸಿಕೊಳ್ಳಿ, ಪೋಷಕರಿಗೆ ಗುರುಗಳನ್ನು ಗೌರವಿಸಿ ಎಂದು ನುಡಿದ ಅವರು ನಮ್ಮ ಕಾಲೇಜು ಈ ವರ್ಷ ಶೇ.೧೦೦ ಫಲಿತಾಂಶ ಬರಲು ನಮ್ಮ ಉಪನ್ಯಾಸಕರ ಪರಿಶ್ರಮ ಎಂದು ಅವರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಬಸವರಾಜ್, ರೂಪ ಹಾಗೂ ಪ್ರಾಧ್ಯಪಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಗುಲಾಬಿ ಹೂ ನೀಡಿ ಸಂವಾದ ನಡೆಸಲಾಯಿತು

error: Content is protected !!