ಭಾರತ ಸರ್ಕಾರ ರಾಸುಗಳ ಗಣತಿ ನಡೆಸುತ್ತಿದೆ. ಅಲ್ಲದೆ ಅವುಗಳ ಕರಾರುವಾಕ್ಕಾದ ವಿವರಗಳನ್ನು ಪಡೆಯಲು ಆಧಾರ್ಕಾರ್ಡ್ ನೀಡಿ ಅದರ ಕಿವಿಗಳಿಗೆ ಟ್ಯಾಗ್ಗಳನ್ನು ಅಳವಡಿಸುವ ಕೆಲಸ
ಭಾರತದಾದ್ಯಂತ ನಡೆಯುತ್ತಿದೆ. ಶಿವಮೊಗ್ಗ ಜಿ.É್ಲಯ ಮನೆ ಮನೆಯ ಕೊಟ್ಟಿಗೆಗೆ ಪಶುವೈದ್ಯ ಇಲಾಖೆಯ ವೈದ್ಯರು ತೆರಳಿ ರಾಸುಗಳ ನೋಂದಾವಣೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 2,39,800 ನೋಂದಾವಣೆಯ ಗುರಿ ಇದ್ದು, ಈಗಾಗಲೇ 1,02,595
ನೋಂದಾವಣೆ ಮಾಡಿ ಆಧಾರ್ ಅಳವಡಿಸ.Áಗಿದೆ.
ಪ್ರತಿಯೊಂದು ಪ್ರದೇಶದಲ್ಲಿಯೂ ಕೆಲವು ರಾಸುಗಳ ಅಪರೂಪದ ತಳಿಗಳ ಸಂರಕ್ಷಣೆ, ಸಂವರ್ಧನೆ ಆಗಬೇಕಾಗಿದೆ. ಆ ದೃಷ್ಟಿಯಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹೈನು ಅಭಿವೃದ್ಧಿ ಸಂಸ್ಥೆ, ಕೆಎಂಎಫ್ ಮತ್ತು ಪಶುಪಾಲನೆ – ಪಶು ವೈದ್ಯಕೀಯ ಇ.Áಖೆ ಜಂಟಿಯಾಗಿ ರಾಸುಗಳ ಸಂತತಿ ಮತ್ತು ಇತರ ವಿಷಯಗಳದಾಖಲಾತಿ ನೋಂದಣಿ ಟ್ಯಾಗ್ ಅಳವಡಿಸುತ್ತಿದೆ.
ರಾಸುಗಳಿಗೆ ಸಂಬಂಧಪಟ್ಟಂತೆ ಆಧಾರ್ ಕಾರ್ಡ್ ನಂಬರ್ ಅಳವಡಿಕೆ ಜೊತೆಯಲ್ಲಿ ಒಂದು ಆ್ಯಪ್ಅನ್ನು ತಯಾರಿಸಲಾಗಿದೆ. ಇದು ಪಶುವೈದ್ಯಕೀಯ ಇ.Áಖೆ ಮತ್ತು ಪೊಲೀಸ್ ಇಲಾಖೆಯಲ್ಲಿಯೂ ಇರುತ್ತದೆ. ಅಂತರ್ಜಾಲದಲ್ಲಿ ಆಧಾರ್ ಕಾರ್ಡ್ ನಂಬರ್ ನಮೂದಿಸಿದರೆ ರಾಸಿನ ಸಂಪೂರ್ಣ ವಿವರ ವಯಸ್ಸು, ತಳಿಯ ವಿವಿಧತೆ, ಮಾಲಿಕರ ವಿವರ, ದೂರವಾಣಿ ಸಂಖ್ಯೆ ಎಲ್ಲವೂ ಲಭ್ಯವಾಗುತ್ತದೆ. ರಾಸುಗಳಿಗೆ ಆಧಾರ್ ಟ್ಯಾಗನ್ನು ಅಳವಡಿಸದೇ ಸಾಗಾಣಿಕೆ ಮಾಡುವ ಹಾಗಿಲ್ಲ. ಇದರಿಂದ ರಾಸುಗಳ ಕಳ್ಳಸಾಗಾಣಿಕೆಗೆ ಕಡಿವಾಣ ಹಾಕಬಹುದಾಗಿದೆ.
ನಾಗರಾಜ: ಗೋಪಾಲಕ: ಭಾರತ ಸರ್ಕಾರದ ರಾಸುಗಳ ನೋಂದಣಿ ಮಾಡಿ ಆಧಾರ್ ನಂಬರನ್ನುಅವುಗಳ ಕಿವಿಗೆ ಟ್ಯಾಗ್ ಮಾಡುವ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಇದರಿಂದ ಗೋವುಗಳ ಸಂರಕ್ಷಣೆ, ಸಂವರ್ಧನೆಗೆ ಅನುಕೂಲವಾಗುತ್ತದೆ.
ಪ್ರಸನ್ನ, ಶಿವಮೊಗ್ಗ: ಕೇಂದ್ರ ಸರ್ಕಾರದ ಈ ಯೋಜನೆ ಗೋವಿನ ತಳಿಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಅವುಗಳು ಅಕಾಲಿಕ ಮರಣ ಹೊಂದಿದರೆ ತಕ್ಷಣ ಪರಿಹಾರವನ್ನು ಕೂಡ ಸರ್ಕಾರದಿಂದ ಪಡೆಯಬಹುದಾಗಿದೆ.
ಮಾಧ್ಯಮ ದೊಂದಿಗೆ ಮಾತನಾಡಿದ ಡಾ|| ತಿಮ್ಮಪ್ಪ ಜೆ.ಆರ್. ಮುಖ್ಯ ಪಶುವೈದ್ಯಾಧಿಕಾರಿ: ಎಲ್ಲಾರಾಸುಗಳ ಆಧಾರ್ ಕಾರ್ಡ್ ನೋಂದಣಿ ಕಾರ್ಯ ಸಾಗರ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ಜಿಲ್ಲಾದ್ಯಂತ ಈ ಕೆಲಸ ಪ್ರಗತಿಯಲ್ಲಿದೆ. ಭಾರತ ಸರ್ಕಾರದ ಉಪಯುಕ್ತ ಯೋಜನೆಯಾಗಿದ್ದು ರಾಸು ಮತ್ತು ಅದರ ಮಾಲಿಕರ ಸಂಪೂರ್ಣ ವಿವರವನ್ನು ಆಧುನಿಕ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಆ್ಯಪ್ ಮೂಲಕವೂ ವಿವರ ಲಭ್ಯವಾಗುತ್ತದೆ.
ಡಾ|| ದಯಾನಂದ: ಆಧುನಿಕ ತಂತ್ರಜ್ಞಾನದ ಮೂಲಕ ರಾಸುಗಳ ಎ.Á್ಲ ಮಾಹಿತಿಯನ್ನು ಆಧಾರ್
ನೋಂದಣಿಯಲ್ಲಿ ಅಳವಡಿಸಲಾಗಿದೆ. ರಾಸುಗಳ ತಳಿ, ಕೃತಕ ಗರ್ಭಧಾರಣೆ, ಅದಕ್ಕೆ ನೀಡುವ ಔಷಧಿ
ಮಾಲಿಕರ ವಿವರ ಎಲ್ಲವನ್ನೂ ಇದರಲ್ಲಿ ಅಳವಡಿಸಲಾಗಿದೆ. ಕೇಂದ್ರ ಸರ್ಕಾರದ ಪಶುವೈದ್ಯಕೀಯ ಮತ್ತುಪಶುಪಾಲನಾ ಇಲಾಖೆ ಹೈನುಗಾರಿಕೆಗೆ ಸಂಪೂರ್ಣ ಭದ್ರತೆ ನೀಡಿದೆ.
ಡಾ|| ಸುನಿತಾ: ದೇಶದಾದ್ಯಂತ ಕೇಂದ್ರ ಸರ್ಕಾರ ರಾಸುಗಳ ಮಾಹಿತಿಯನ್ನು ಸಂಗ್ರಹಿಸುವ ಕೆಲಸ
ಮಾಡುತ್ತಿದೆ. ಇದಕ್ಕೆ ಆಧಾರ್ ಟ್ಯಾಗ್ವೊಂದನ್ನು ನೀಡಿ ಯಾವುದೇ ರಾಸು ಎಲ್ಲಿಯೇ ಹೋದರೂ ಟ್ಯಾಗ್ ಮೂಲಕ ಅದರ ಸಂಪೂರ್ಣ ವಿವರವನ್ನು ಪಡೆದುಕೊಳ್ಳಲು ಈ ಯೋಜನೆ ಅನುಕೂಲವಾಗಿದ್ದು
ಹೈನುಗಾರಿಕೆಯನ್ನು ನಡೆಸುವ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಭಾರತ ಸರ್ಕಾರ ಹೈನು ಉದ್ಯಮ ನಡೆಸುವವರಿಗೆ ಯಾವ ಪ್ರದೇಶದಲ್ಲಿ ಯಾವ ರೀತಿಯ ರಾಸಿನ ತಳಿಗಳಿವೆ, ಅವುಗಳನ್ನು ಹೇಗೆ ಸಾಕಬೇಕು, ತಳಿಯ ವಿವರ ಎಲ್ಲವನ್ನೂ ಗಣತಿಯ ಮೂಲಕ, ಆಧಾರ್ ಮೂಲಕ, ಆ್ಯಪ್ ಮೂಲಕ ಸಂಗ್ರಹಿಸುತ್ತಿದೆ. ಭವಿμಂಚಿzಂ ದಿನಗಳಲ್ಲಿ ಇದೊಂದು ಜಾನುವಾರುಗಳ ಸಂಪೂರ್ಣ ಮಾಹಿತಿ ನೀಡುವ ದೇಶದ ಅತಿ ಮುಖ್ಯ ಯೋಜನೆಯಾಗಿ ಹೊರಹೊಮ್ಮಲಿದೆ.