ಪರಿಸರ ಉಳಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತ ಮಾಡುವ ಉದ್ದೇಶದಿಂದ ಜಾಗೃತಿ ಮೂಡಿಸಲು ಸೈಕಲ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದೆನೆ. ಈ ಮೂಲಕ ಗಿನ್ನೆಸ್ ದಾಖಲೆ ಮಾಡಲು ಮುಂದಾಗಿದ್ದೆನೆ ಎಂದು ಸಾಧಕ ಗುರ್ರಂ ಚೈತನ್ಯ ಹೇಳಿದ್ದಾರೆ. ನಗರದ ಪ್ರತಿಷ್ಟಿತ ಮೈತ್ರಿ ಮೈ ಜುವೆಲ್ಸ್ ವತಿಯಿಂದ ಅಭಿನಂದನೆ ಸ್ವೀಕರಿಸಿ, ಆಂಧ್ರ ಪ್ರದೇಶದ ನೆಲ್ಲೂರಿನ ಯುವಕ ಗುರ್ರಂ ಚೈತನ್ಯ ಮಾತನಾಡಿದ್ದಾರೆ. ಈಗಾಗಲೇ, ನಾನು 156 ದಿನಗಳನ್ನು ಸೈಕಲ್ ಸವಾರಿ ಮೂಲಕ ಪೂರೈಸಿದ್ದೇನೆ. ಈ ಮೂಲಕ 10 ಸಾವಿರ ಕಿ.ಮೀ. ಪೂರೈಸಿದ್ದೇನೆ. ಇನ್ನೂ 40 ಸಾವಿರ ಕಿ.ಮೀ. ಕ್ರಮಿಸುವ ಗುರಿಯನ್ನು ಹೊಂದಿದ್ದು, ಸೈಕಲ್ ಮೂಲಕ ಇಡೀ ಭಾರತದಲ್ಲಿ ಪರಿಸರ ಮತ್ತು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಜಾಗೃತಿ ಮೂಡಿಸುತ್ತಿದ್ದೆನೆ ಎಂದು ಹರ್ಷ ವ್ಯಕ್ತಪಡಿಸಿದರು. ನಾನು ಹೋದಲ್ಲೆಲ್ಲೆಡೆ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ. ಜನರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನನ್ನ ಉದ್ದೇಶವನ್ನು ಕೊಂಡಾಡುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ, ನನಗೆ ಅತೀವ ಸಂತೋಷವಾಗುತ್ತಿದೆ. ಇನ್ನೂ 40 ಸಾವಿರ ಕಿ.ಮೀ. ಕ್ರಮಿಸುವ ಗುರಿ ಜೊತೆಗೆ, ಜನರಲ್ಲಿ ಜಾಗೃತಿ ಮೂಡಿಸುವ ಅಭಿಲಾಷೆ ಹೊಂದಿದ್ದೆನೆ. ಈ ಸೈಕಲ್ ಮೆಗಾ ಜಾಥಾಕ್ಕೆ ನನ್ನ ಕುಟುಂಬದವರು ಸಂತಸದಿಂದ ಸಹಕರಿಸಿದ್ದಾರೆ. ನನ್ನ ಗುರಿ ಸಾಧನೆಗೆ ಅವರು ಬೆನ್ನೆಲೆಬು ಆಗಿದ್ದಾರೆ. ನನ್ನ ಸ್ನೇಹಿತರು ಸೇರಿದಂತೆ ಅನೇಕರು ಈ ಮೆಗಾ ಜಾಥಾಗೆ ನನ್ನ ಕೈ ಜೋಡಿಸಿದ್ದಾರೆ ಎಂದರು. ಅದರಲ್ಲೂ, ಈ ನನ್ನ ದಾಖಲೆಗೆ ಮೈತ್ರಿ ಮೈ ಜುವೆಲ್ಸ್ ಸಂಸ್ಥೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮೈತ್ರಿ ಮೈ ಜುವೆಲ್ಸ್ ಆಭರಣ ಸಂಸ್ಥೆ ವತಿಯಿಂದ ಸಾಧಕ ಗುರ್ರಂ ಚೈತನ್ಯ ಅವರಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು.
ಈ ವೇಳೆ, ಮೈತ್ರಿ ಮೈ ಜುವೆಲ್ಸ್ ಸಂಸ್ಥೆ ಸಿಇಓ ಸೆಂಥಿಲ್ ವೇಲನ್, ಎಂ. ಶಿವಕುಮಾರ್, ರಾಧಿಕಾ ಜಗದೀಶ್, ದತ್ತಾಕುಮಾರ್, ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ. ವಿಜಯ್ ಕುಮಾರ್, ಬದ್ರಿನಾಥ್, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.