ಕುರಿತು ರಾಷ್ಟ್ರೀಯ ಕೋಕೋ ಸಮ್ಮೇಳನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಹಾಗೂ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ (DCCD), ಕೊಚ್ಚಿ ವತಿಯಿಂದ ದಿನಾಂಕ: 03.06.2023 ರಂದು ಬೆಳಿಗ್ಗೆ 10.00 ಗಂಟೆಗೆ ‘ಭಾರತದಲ್ಲಿ ಕೋಕೋ ಅಭಿವೃದ್ಧಿ – ಸವಾಲುಗಳು ಮತ್ತು ಅವಕಾಶಗಳು’ ಕುರಿತು ರಾಷ್ಟ್ರೀಯ ಕೋಕೋ ಸಮ್ಮೇಳನವನ್ನು MCA/MBA ಸಭಾಂಗಣ, ಜವಹಾರಲಾಲ್ ನೆಹರೂ ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ನವಿಲೆ, ಶಿವಮೊಗ್ಗದಲ್ಲಿ ಏರ್ಪಡಿಸಲಾಗಿರುತ್ತದೆ. ಸದರಿ ಸಮ್ಮೇಳನವನ್ನು ಡಾ. ಪ್ರಭಾತ್ ಕುಮಾರ್, ಆಯುಕ್ತರು (ತೋಟಗಾರಿಕೆ), ಕೃಷಿ
ಮತ್ತು ರೈತ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರರವರು ಉದ್ಘಾಟಿಸಲಿದ್ದಾರೆ. ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಡಾ. ಆರ್.ಸಿ. ಜಗದೀಶ, ಕುಲಪತಿಗಳು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕಿಶೋರ್ ಕುಮಾರ್ ಕೊಡಗಿ, ಅಧ್ಯಕ್ಷರು, ಕ್ಯಾಂಸ್ಕೋ, ಡಾ. ವೆಂಕಟೇಶ್ ಹುಬ್ಬಳ್ಳಿ, ಡಿ.ಸಿ.ಸಿ.ಡಿ., ಕೊಚ್ಚಿನ್ ಮತ್ತು ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯರುಗಳು ಉಪಸ್ಥಿತರಿರುತ್ತಾರೆ.
